ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಗೀತ ಸಂಯೋಜಕ, ಗಾಯಕ ಎಆರ್ ರೆಹಮಾನ್ ಅವರು ಪತ್ನಿ ಸೈರಾ ಬಾನು ಜೊತೆ ವಿಚ್ಛೇದನ ಘೋಷಣೆ ಮಾಡಿದ್ದಾರೆ. ಹೀಗಿರುವಾಗಲೇ ಅವರ ಟ್ರೂಫ್ನಲ್ಲೇ ಇದ್ದ ಮೋಹಿನಿ ಡೇ ಕೂಡ ಡಿವೋರ್ಸ್ ಘೋಷಣೆ ಮಾಡಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ರೆಹಮಾನ್ ಅವರು ತಮ್ಮದೇ ಟ್ರೂಫ್ ಹೊಂದಿದ್ದಾರೆ. ಈ ಟ್ರೂಫ್ನಲ್ಲಿ ಮೋಹಿನಿ ಅವರು ಬಾಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಮೋಹಿನಿ ಮ್ಯೂಸಿಕ್ ಕಂಪೋಸರ್ ಮಾರ್ಕ್ ಎಂಬುವವರ ಜೊತೆ ವಿವಾಹ ಆಗಿದ್ದರು. ಈಗ ಇಬ್ಬರೂ ವಿಚ್ಛೇದನ ಘೋಷಣೆ ಮಾಡಿದ್ದಾರೆ. ರೆಹಮಾನ್ ವಿಚ್ಛೇದನ ಘೋಷಣೆಯ ಬೆನ್ನಲ್ಲೇ ಮೋಹಿನಿ ಈ ಘೋಷಣೆ ಮಾಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಮೋಹಿನಿ ಈ ಬಗ್ಗೆ ಬರೆದುಕೊಂಡಿದ್ದಾರೆ. ‘ಭಾರದ ಮನಸ್ಸಿನಿಂದ ನಾನು ಹಾಗೂ ಮಾರ್ಕ್ ಬೇರೆ ಆಗುತ್ತಿದ್ದೇವೆ. ಇಬ್ಬರೂ ಪರಸ್ಪರ ಸಮ್ಮತಿಯಿಂದ ದೂರ ಆಗುತ್ತಿದ್ದೇವೆ. ನಮ್ಮ ಜೀವನದಲ್ಲಿ ಇಬ್ಬರಿಗೂ ಬೇರೆ ಬೇರೆ ಅಂಶಗಳು ಬೇಕಾಗಿವೆ. ಪರಸ್ಪರ ಒಪ್ಪಂದ ಪಡೆದು ಬೇರೆ ಆಗುತ್ತಿದ್ದೇವೆ’ ಎಂದು ಮೋಹಿನಿ ಬರೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಖಾಸಗಿತನಕ್ಕೆ ಆದ್ಯತೆ ನೀಡಿ ಎಂದುಕೋರಿದ್ದಾರೆ.
ಮೋಹಿನಿ ಡೇ ಅವರು ವಿಚ್ಛೇದನದ ಬಳಿಕ ಸುಮ್ಮನೆ ಕೂರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಮುಂದಿನ ದಿನಗಳಲ್ಲಿ ವಿವಿಧ ಪ್ರಾಜೆಕ್ಟ್ಗಳಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಹೇಳಿಕೊಂಡಿದ್ದಾರೆ. ರೆಹಮಾನ್ ಅವರ 40ಕ್ಕೂ ಅಧಿಕ ಶೋಗಳಲ್ಲಿ ಮೋಹಿನಿ ಕೆಲಸ ಮಾಡಿದ್ದಾರೆ.
ರೆಹಮಾನ್ ಅವರ ವಿಚಾರಕ್ಕೆ ಬರೋದಾದರೆ 1995ರಲ್ಲಿ ಸೈರಾ ಬಾನು ಜೊತೆ ರೆಹಮಾನ್ ವಿವಾಹ ನೆರವೇರಿತು. ಇಬ್ಬರೂ 29 ವರ್ಷಗಳ ಕಾಲ ಒಟ್ಟಾಗಿ ಸಂಸಾರ ನಡೆಸಿದ್ದರು. ಆದರೆ, ಇವರು ಈಗ ಬೇರೆ ಆಗುವ ಘೋಷಣೆ ಮಾಡುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.