ದೇವರಿಗೆ ಆರತಿ ಸಮರ್ಪಣೆ ವೇಳೆ ʻಮೇಕೆʼಯ ಧನ್ಯತಾಭಾವ ಕಂಡು ಆಶ್ಚರ್ಯಚಕಿತರಾದ ನೆಟ್ಟಿಗರು 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯಲ್ಲೊಂದು ಹೃದಯ ಸ್ಪರ್ಶಿ ಘಟನೆ ನಡೆದಿದೆ. ದೇವರಿಗೆ ಮನುಷ್ಯರು ಮಾತ್ರ ತಮ್ಮ ಭಕ್ತಿಯನ್ನು ತೋರುತ್ತಾರೆ ಎಂಬುದು ಎಷ್ಟು ಸತ್ಯವೋ ಪ್ರಾಣಿಗಳಿಗೆ ಮನುಷ್ಯರಿಗಿಂತ ಹೆಚ್ಚು ಭಕ್ತಿ ಎಂಬುದು ಈ ವಿಡಿಯೋದಲ್ಲಿ ಕಂಡುಬಂದಿದೆ.

ಗಂಗಾ ನದಿಯ ದಡದಲ್ಲಿರುವ ಪುರಾತನ ಶಿವ ದೇವಾಲಯದಲ್ಲಿ ಭಕ್ತರು ಶಿವನನ್ನು ಬಾಬಾ ಆನಂದೇಶ್ವರ ಎಂದು ಸಂಬೋಧಿಸುತ್ತಾರೆ. ಸಂಜೆ ದೇವಾಲಯದ ಅರ್ಚಕರು ದೇವರಿಗೆ ಆರತಿ ಸಲ್ಲಿಸಿ ಮಂತ್ರಗಳನ್ನು ಪಠಿಸುವ ವೇಳೆ ಅಲ್ಲಿರುವ ಭಕ್ತರು ಮಂಡಿಯೂರಿ ಕುಳಿತು ದೇವರನ್ನು ಪ್ರಾರ್ಥಿಸುವಂತೆ, ಅದೇ ಸಮಯದಲ್ಲಿ ಒಂದು ಮೇಕೆ ಕೂಡ ಅದರ ಭಕ್ತಿಯನ್ನು ಪ್ರದರ್ಶಿಸಿದೆ. ಭಕ್ತಾದಿಗಳ ಜೊತೆಗೆ ಮೇಕೆ ಮಂಡಿಯೂರಿ ದೇವರಗೆ ಧನ್ಯತಾಭಾವವನ್ನು ತೋರಿದೆ. ಇದನ್ನು ಕಂಡು ಅಲ್ಲಿದ್ದ ಭಕ್ತರು ಹಾಗೂ ನೆಟ್ಟಿಗರು ಆಶ್ಚರ್ಯಚಕಿತರಾದರು.

ಡೇವಿಡ್ ಜಾನ್ಸನ್ ಎಂಬ ವ್ಯಕ್ತಿ ಟ್ವಿಟರ್‌ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಮೇಕೆ ಭಕ್ತಿಯ ವಿಡಿಯೋ ವೈರಲ್ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!