ಹೊಸದಿಗಂತ ಡಿಜಿಟಲ್ ಡೆಸ್ಕ್:
5 ತಿಂಗಳಿನಿಂದ ಉಕ್ರೇನ್ ನಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾ ಆ ದೇಶವನ್ನು ಮರುಭೂಮಿಯನ್ನಾಗಿ ಮಾಡುತ್ತಿದೆ. ಎಷ್ಟೇ ಶಕ್ತಿ ಸಾಮರ್ಥ್ಯಗಳಿದ್ದರೂ ಉಕ್ರೇನ್‌ನ ಒಂದು ಮೇಕೆಯನ್ನು ಮನೀಸಲಾಗದೆ ರಷ್ಯಾ ಸೇನೆ ಸೋತು ಸುಣ್ಣವಾಗಿದ್ದಾರೆ. ಮೇಕೆ ಓಟಕ್ಕೆ ಒಬ್ಬರಲ್ಲಾ..ಇಬ್ಬರಲ್ಲಾ ಬರೋಬ್ಬರಿ 40ಕ್ಕೂ ಹೆಚ್ಚು ರಷ್ಯಾದ ಸೈನಿಕರು ಗಾಯಗೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ಉಕ್ರೇನ್ ಗುಪ್ತಚರ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಉಕ್ರೇನ್‌ನ ಕಿನ್ಸ್ಕಿ ರೋಜ್ಡೋರಿ ಗ್ರಾಮದ ಆಸ್ಪತ್ರೆಯ ಬಳಿ ರಷ್ಯಾ ಸೇನೆ ಗ್ರೆನೇಡ್‌ಗಳನ್ನು ನೆಲದ ಮೇಲೆ ಜೋಡಿಸಿ ಅವುಗಳಿಗೆ ದಾರವನ್ನು ಬಿಗಿಗೊಳಿಸುತ್ತಿದ್ದರು. ಆ ದಾರವನ್ನು ಯಾರಾದರೂ ತುಳಿದರೆ ಗ್ರೆನೇಡ್ ಸಿಡಿಯುವಂತೆ ಫಿಕ್ಸ್ ಮಾಡಿದ್ದರು. ಸೈನಿಕರು ಗ್ರೆನೇಡ್ ಜೋಡಿಸುತ್ತಿರುವಾಗಲೇ, ಸ್ವಲ್ಪ ದೂರದಲ್ಲಿದ್ದ ಮೇಕೆ ಫಾರಂನಿಂದ ಒಂದು ಮೇಕೆ ತಪ್ಪಿಸಿಕೊಂಡು ಈ ಕಡೆಗೆ ಬಂದಿದೆ. ಅದನ್ನು ಕಂಡ ಸೈನಿಕರು ಮೇಕೆ ಓಡಿಸುವ ಪ್ರಯತ್ನ ಮಾಡದರೂ ಸಫಲವಾಗದೆ ಗ್ರೆನೇಡ್ ದಾರ ತುಳಿಯುತ್ತಿದ್ದಂತೆ ಸ್ಪೋಟಗೊಂಡಿದೆ. ಸ್ಪೋಟದ ಶಬ್ದಕ್ಕೆ ಗಾಬರಿಗೊಂಡ ಮೇಕೆ ವೇಗವಾಗಿ ಓಡಿ ಸತತವಾಗಿ ಒಂದರ ಹಿಂದೆ ಒಂದರಂತೆ ಗ್ರೆನೇಡ್ ಸಿಡಿಸಿದೆ. ಅವುಗಳನ್ನು ರೆಡಿ ಮಾಡುತ್ತಿದ್ದ ರಷ್ಯಾ ಸೈನಿಕರು ಗಾಯಗೊಂಡಿದ್ದಾರೆ. ಉಕ್ರೇನ್ ಗುಪ್ತಚರ ಮೂಲಗಳು ಸ್ಫೋಟದಲ್ಲಿ 40 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ, ಅವರಲ್ಲಿ ಕೆಲವರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.
ಸ್ಪೋಟದಲ್ಲಿ ಈ ಮೇಕೆ ಪ್ರಾಣಾಪಾಯದಿಂದ ಪಾರಾಗಿದೆಯೇ ಇಲ್ಲವೇ..? ಎಂಬುದು ತಿಳಿದಿಲ್ಲ. ರಷ್ಯಾದ ಸೈನಿಕರನ್ನು ಭಯಭೀತಗೊಳಿಸಿರುವ ಮೇಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ “ಗೋಟ್ ಆಫ್ ಕೀವ್” ಎಂದು ಕರೆಯುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.