ಭಾರತೀಯ ಕುಸ್ತಿಪಟುವಿನ ಮೇಲೆ ಹಲ್ಲೆ ಮಾಡಿದ್ದ ಅಪ್ಘನ್‌ ಕುಸ್ತಿಪಟುವಿನ ಬಳಿ ಭಾರತದ ಪಾಸ್‌ ಪೋರ್ಟ್‌, ಆಧಾರ್‌ ಕಾರ್ಡ್‌ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಅಪ್ಘಾನಿಸ್ತಾನದ ಎಂಎಂಎ ಸೂಪರ್‌ ಸ್ಟಾರ್‌ ಫೈಟರ್‌ ಬಡಾಕ್ಷಿ ಅಬ್ದುಲ್‌ ಅಜೀಂ ಬಳಿ ಭಾರತೀಯ ಪಾಸ್‌ ಪೋರ್ಟ್‌ ಮತ್ತು ಆಧಾರ್‌ ಕಾರ್ಡ್‌ ಇರುವುದು ಬೆಳಕಿಗೆ ಬಂದಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಅಪ್ಘನ್‌ ಮೂಲದ ಈ ಕುಸ್ತಿಪಟುವಿನ ಬಳಿ ಅಪ್ಘಾನಿಸ್ತಾನದ ಪಾಸ್‌ಪೋರ್ಟ್‌ ಹಾಗೆಯೇ ಭಾರತೀಯ ಪಾಸ್‌ಪೋರ್ಟ್‌ ಹೀಗೆ ಎರಡು ದೇಶಗಳ ಪೌರತ್ವ ದಾಖಲೆಯಿರುವುದನ್ನು ಎಂಎಂಎ ಟಾಕ್ ಶೋ ತಜ್ಞ ಪರ್ವಿನ್ ದಬಾಸ್ ಹೊರಹಾಕಿದ್ದಾರೆ. ಅಲ್ಲದೇ ಬದಲಾಯಿಸಿದ ಹೆಸರಿನಲ್ಲಿ ಆಧಾರ್‌ ಕಾರ್ಡ್‌ ಇರುವುದನ್ನೂ ಅವರು ಬಹಿರಂಗಪಡಿಸಿದ್ದಾರೆ.
ಇತ್ತೀಚೆಗೆ ಅಂದರೆ ಜೂನ್.‌24ರಂದು ನವದೆಹಲಿಯಲ್ಲಿ ನಡೆದ ಮ್ಯಾಟ್ರಿಕ್ಸ್ ಫೈಟ್ ನೈಟ್9 ನ ಸಮಾರಂಭವೊಂದರಲ್ಲಿ ಫೈಟಿಂಗ್‌ ರಿಂಗ್‌ ನ ಹೊರಗಡೆ ಭಾರತೀಯ ಕುಸ್ತಿಪಟು ಶ್ರೀಕಾಂತ್ ಶೇಖರ್ ಮೇಲೆ ಬಡಾಕ್ಷಿ ಅಮಾನುಷವಾಗಿ ದಾಳಿ ನಡೆಸಿದ್ದ. ಹೊಡೆದಾಟದಲ್ಲಿ ದವಡೆ ಮುರಿದುಕೊಂಡು ಗಾಯಗೊಂಡ ಶ್ರೀಕಾಂತ್‌ ಆಸ್ಪತ್ರೆಗೆ ದಾಖಲಾಗಿದ್ದರು. ಈ ದಾಳಿಯ ವಿವರಗಳು ಹೊರಬೀಳುತ್ತಿದ್ದಂತೆಯೇ ಅಬ್ದುಲ್ ಬಡಾಕ್ಷಿ ಭಾರತದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದ ಎಂದು ದಾಬಾಸ್ ಹೇಳಿದ್ದಾರೆ.

ಅಜೀಂ ಸೇಥಿ ಎಂಬ ಹೆಸರಲ್ಲಿ ಬಡಾಕ್ಷಿ ಭಾರತದ ಆಧಾರ್‌ ಕಾರ್ಡ್‌ ಹೊಂದಿರುವ ಪೋಟೋಗಳನ್ನು ದಾಬಾಸ್‌ ಬಹಿರಂಗ ಪಡಿಸಿದ್ದಾರೆ. ಇನ್ನು ಹಲ್ಲೆಗೊಳಗಾಗಿರುವ ಶ್ರೀಕಾಂತ್‌ ಅಬ್ದುಲ್ ಬಡಾಕ್ಷಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ದಾಬಾಸ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!