Thursday, March 30, 2023

Latest Posts

ಹಳಿತಪ್ಪಿದ ಗೋದಾವರಿ ಎಕ್ಸ್‌ಪ್ರೆಸ್ ರೈಲು: ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶಾಖಪಟ್ಟಣದಿಂದ ಸಿಕಂದರಾಬಾದ್‌ಗೆ ಬರುತ್ತಿದ್ದ ಗೋದಾವರಿ ಎಕ್ಸ್‌ಪ್ರೆಸ್ ರೈಲು ಹೈದರಾಬಾದ್‌ನ ಹೊರವಲಯದಲ್ಲಿ ಹಳಿತಪ್ಪಿದೆ.ಬುಧವಾರ ಬೆಳಗ್ಗೆ ಘಟ್‌ಕೇಸರ್ ಬಳಿಯ ಎನ್‌ಎಫ್‌ಸಿ ಬಳಿ ಹಳಿ ತಪ್ಪಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ತೈಲ ಸೋರಿಕೆಯಿಂದ ಅಪಘಾತ ಸಂಭವಿಸಿರುವುದಾಗಿ ತಿಳಿದುಬಂದಿದೆ. ಹಳಿ ತಪ್ಪಿದ ಸಮಯದಲ್ಲಿ ರೈಲು ಗಂಟೆಗೆ 100 ಕಿಮೀ ವೇಗದಲ್ಲಿ ಚಲಿಸುತ್ತಿದ್ದು, ರೈಲಿನ ಕೊನೆಯ ಆರು ಬೋಗಿಗಳು ಹಳಿತಪ್ಪಿದ್ದಾಗಿ ತಿಳಿದಿದೆ. ಬೋಗಿಗಳು ಹಳಿತಪ್ಪಿ ಉರುಳದ ಕಾರಣ ಅಪಾಯ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನರಲ್ ಬೋಗಿಗಳು ತೀವ್ರವಾಗಿ ಹಾನಿಗೀಡಾಗಿದ್ದು, ಒಂದರ ಮೇಲೊಂದರಂತೆ ಬಿದ್ದಿದ್ದರಿಂದ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸುಮಾರು 500 ಮೀಟರ್ ನಷ್ಟು ಟ್ರ್ಯಾಕ್ ಹಾನಿಯಾಗಿದೆ. ಹಳಿತಪ್ಪಿದ 5 ಬೋಗಿಗಳನ್ನು ಬಿಟ್ಟು ಗೋದಾವರಿ ಎಕ್ಸ್‌ಪ್ರೆಸ್ ಸಿಕಂದರಾಬಾದ್‌ನಿಂದ ಹೊರಟಿದೆ. ಈ ಘಟನೆಯಿಂದಾಗಿ ಹಲವು ರೈಲುಗಳ ಸಂಚಾರ ಸ್ಥಗಿತಗೊಂಡಿದ್ದು, ಭುವನಗಿರಿ, ಬೀಬಿನಗರ ಮತ್ತು ಘಟ್‌ಕೇಸರ್‌ ನಿಲ್ದಾಣಗಳಲ್ಲಿ ಹಲವು ರೈಲುಗಳನ್ನು ನಿಲ್ಲಿಸಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!