ಗೋಧ್ರಾ ಗಲಭೆ: ಸಬರಮತಿ ರೈಲಿಗೆ ಕಿಚ್ಚು ಹಚ್ಚಿದ್ದ ರಫೀಕ್‌ ಗೆ ಜೀವಾವಧಿ ಶಿಕ್ಷೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೇಶದೆಲ್ಲೆಡೆ ಸದ್ದು ಮಾಡಿದ್ದ 2002ರ ಗೋದ್ರಾ ಗಲಭೆಗೆ ಮೂಲ ಕಾರಣಾವಾಗಿದ್ದ ವ್ಯಕ್ತಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದೆ. ಸಬರಮತಿ ಎಕ್ಸ್‌ ಪ್ರೆಸ್ ನಲ್ಲಿ ರಾಮಭಕ್ತರಿರುವ ಬೋಗಿಗೆ ಬೆಂಕಿ ಹಚ್ಚಿ ಹಲವರ ಸಾವಿಗೆ ಕಾರಣವಾಗಿದ್ದ ರಫೀಕ್ ಹುಸೇನ್ ಬಟುಕ್ ಎಂಬ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ವರದಿಗಳ ಪ್ರಕಾರ ಕೊಲೆಗಳಿಗೆ ಆತ ಸಂಚು ರೂಪಿಸಿರುವುದು ಸಾಬೀತಾಗಿದೆ. ಕಳೆದ 19 ವರ್ಷಗಳಿಂದ ರಪೀಕ್‌ ಕಾನೂನು ಅಧಿಕಾರಿಗಳ ಕೈಯಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದ. ಗೋಧ್ರಾ ತನಿಖೆಯ ಸಂದರ್ಭದಲ್ಲಿ ಆತನ ಹೆಸರು ಕೇಳಿ ಬರುತ್ತಿದ್ದಂತೆ ರಾಷ್ಟ್ರ ರಾಜಧಾನಿ ದೆಹಲಿಗೆ ಆತ ಓಡಿಹೋಗಿದ್ದ. ಆದರೆ ಫೆಬ್ರವರಿ 14, 2021 ರಂದು ಗೋಧ್ರಾದಲ್ಲಿಯೇ ಆತನನ್ನು ಬಂಧಿಸಲಾಗಿತ್ತು.

ರಫೀಕ್‌ ಸಬರಮತಿ ಎಕ್ಸ್‌ಪ್ರೆಸ್‌ ಗೆ ಬೆಂಕಿ ಹಚ್ಚಲು ಪಿತೂರಿ ನಡೆಸಿದ ಕಿರಾತಕರ ಗುಂಪಿನ ಕೋರ್‌ ತಂಡದ ಸದಸ್ಯನಾಗಿದ್ದ. ಅಲ್ಲದೇ ಮುಸ್ಲಿಂ ಗುಂಪನ್ನು ಪ್ರಚೋದಿಸಿ ಹಿಂದೂಗಳಿರುವ ಬೋಗಿಗೆ ಬೆಂಕಿ ಹಚ್ಚಲು ಪೆಟ್ರೋಲ್ ಬಾಂಬ್‌ಗಳನ್ನು ಪೂರೈಸಿದ್ದ. ಫೆಬ್ರವರಿ 27, 2002 ರಂದು ನಡೆದ ಘಟನೆಯಲ್ಲಿ ಒಟ್ಟು 59 ಕರಸೇವಕರು (27 ಮಹಿಳೆಯರು ಮತ್ತು 10 ಮಕ್ಕಳು) ಸಜೀವ ದಹನವಾಗಿದ್ದರು.

ಇದೀಗ ಈ ಹತ್ಯೆಯ ಮಾಸ್ಟರ್‌ ಮೈಂಡ್‌ ಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!