ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಸಾರಾ ಅಲಿಖಾನ್ ಹಿಂದೂ ದೇವಾಲಯಗಳಲ್ಲಿ ಕಾಣಿಸೋದು ಮಾಮೂಲು ಎನ್ನುವಂತಾಗಿದೆ. ಮನಸ್ಸಿಗೆ ನೆಮ್ಮದಿ ಇಲ್ಲ ಎನಿಸಿದಾಗ, ಸಿನಿಮಾ ರಿಲೀಸ್ ಸಮಯದಲ್ಲಿ ಹೀಗೆ ತಮಗೆ ಬೇಕಾದಾಗಲೆಲ್ಲಾ ಸಾರಾ ದೇಗುಲಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸ್ತಾರೆ.
ನಿನ್ನೆಯಷ್ಟೇ ಸಾರಾ ಉಜ್ಜಯನಿಯ ಮಹಾಕಾಳೇಶ್ವರ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು, ಈ ವೇಳೆ ಮುಸ್ಲಿಮರು ಅಷ್ಟು ಸುಲಭವಾಗಿ ಹಿಂದೂ ದೇಗುಲಗಳಿಗೆ ಬರೋದಿಲ್ಲ. ಇದೆಲ್ಲಾ ಪ್ರಚಾರಕ್ಕಾಗಿ ಮಾಡುವ ಗಿಮಿಕ್ ಎಂದು ನೆಟ್ಟಿಗರು ಟೀಕಿಸಿದ್ದರು.
ಇದಕ್ಕೆ ಸಾರಾ ಉತ್ತರ ನೀಡಿದ್ದು, ನಾನು ಯಾವ ಕಮೆಂಟ್‌ಗಳಿಗೂ ತಲೆ ಕೆಡಿಸಿಕೊಳ್ಳುವಷ್ಟು ವೀಕ್ ಅಲ್ಲ. ಹಿಂದೂ ದೇವರ ಮೇಲೆ ನನಗಿರುವ ಭಕ್ತಿ, ನಂಬಿಕೆಯನ್ನು ಯಾರೂ ನನ್ನಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಮುಂದೆಯೂ ಮನಸ್ಸಿಗೆ ಬೇಕು ಎನಿಸಿದಾಗ ದೇವರ ಸನ್ನಿಧಿಗೆ ಹೋಗುತ್ತೇನೆ ಎಂದು ಹೇಳಿದ್ದಾರೆ.