ಹೊಸದಿಗಂತ ಡಿಜಿಟಲ್ ಡೆಸ್ಕ್: ನಟ ಆಮಿರ್ ಖಾನ್ ಸದ್ಯಕ್ಕೆ ನಟನೆಯಿಂದ ದೂರವೇ ಉಳಿದಿದ್ದಾರೆ. ಆಗಾಗ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಆಮಿರ್ ಕಾಣಿಸುತ್ತಿದ್ದು, ಸಂಪೂರ್ಣವಾಗಿ ಸಿನಿಮಾಗಳಿಂದ ಬ್ರೇಕ್ ಪಡೆದಿದ್ದಾರೆ.
ಸದ್ಯಕ್ಕಂತೂ ಸಿನಿಮಾಗೆ ಕಂ ಬ್ಯಾಕ್ ಮಾಡೋದಿಲ್ಲ ಎಂದು ಆಮಿರ್ ಹೇಳಿದ್ದು, ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಎಲ್ಲಾ ಸ್ಕ್ರಿಪ್ಟ್‌ನ್ನು ಅಳೆದು ತೂಗಿ ಒಪ್ಪುವ ಆಮಿರ್ ಲಾಲ್ ಸಿಂಗ್ ಚಡ್ಡಾ ಸಿನಿಮಾ ಫ್ಲಾಪ್ ಆದ ನಂತರ ಇನ್ಯಾವುದೇ ಸಿನಿಮಾಗೆ ಒಕೆ ಹೇಳಿಲ್ಲ.
ಸಿನಿಮಾಗಳ ಓಟದಲ್ಲಿ ಫ್ಯಾಮಿಲಿ ಮರೆತಿದ್ದೇನೆ, ಅವರ ಜೊತೆ ಸ್ವಲ್ಪ ಸಮಯ ಕಳೆಯುತ್ತೇನೆ ನಂತರ ನೋಡೋಣ ಎಂದು ಆಮಿರ್ ಹೇಳಿದ್ದಾರೆ.