ಮಹಾಶಿವರಾತ್ರಿಗೆ ಊರಿಗೆ ಹೋಗ್ತೀರಾ? ಕೆ ಎಸ್ ಆರ್ ಟಿಸಿಯಿಂದ 1500 ಹೆಚ್ಚುವರಿ ಬಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಊರಿಗೆ ತೆರಳುವವರಿಗೆ ಕೆಎಸ್‌ಆರ್‌ಟಿಸಿ ಸಿಹಿ ಸುದ್ದಿ ನೀಡಿದೆ.

ಮಹಾಶಿವರಾತ್ರಿ ನಂತರ ವೀಕೆಂಡ್ ಇರುವ ಕಾರಣ ಹೆಚ್ಚಿನ ಜನರು ತಮ್ಮ ಊರುಗಳಿಗೆ ತೆರಳುವ ಸಾಧ್ಯತೆಯ ಕಾರಣ ಮಾ.7 ರಿಂದ 10 ರವರೆಗೂ ವಿಶೇಷ ಬಸ್‌ಗಳನ್ನು ಒದಗಿಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ.

ಬೆಂಗಳೂರಿನಿಂದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಭ್ಣಳ್ಳಿ, ತಿರುಪತಿ, ಗೋಕರ್ಣ, ಹೈದರಾಬಾದ್ ಶಿರಸಿ ಮತ್ತಿತರ ಕಡೆಗೆ ಒಟ್ಟು 1,500 ಎಕ್ಸ್ಟ್ರಾ ಬಸ್‌ಗಳು ಸಂಚರಿಸಲಿವೆ.

ನಂತರ ಮಾರ್ಚ್ 10 ಹಾಗೂ 11 ರಂದು ರಾಜ್ಯದ ವಿವಿಧ ನಗರಗಳಿಂದ ಬೆಂಗಳೂರಿ ಬಸ್‌ಗಳು ಬರಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!