Sunday, December 10, 2023

Latest Posts

ASIAN GAMES 2023 | ಸ್ಕ್ವಾಷ್ ಮಿಶ್ರ ಡಬಲ್ಸ್ ನಲ್ಲಿ ಭಾರತಕ್ಕೆ ಸ್ವರ್ಣಪದಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಚಿನ್ನದ ಬೇಟೆ ಮುಂದುವರಿದಿದೆ. ಬೆಳಗ್ಗೆ ಮಹಿಳಾ ಆರ್ಚರಿ ಟೀಮ್ ಚಿನ್ನದ ಪದಕ ಗಳಿಸಿದ್ರೆ ಇದೀಗ ಸ್ಕ್ವಾಷ್ ಮಿಶ್ರ ಡಬಲ್ಸ್‌ನಲ್ಲಿ ಭಾರತದಕ್ಕೆ ಮತ್ತೊಂದು ಚಿನ್ನದ ಪದಕ ದೊರಕಿದೆ.

ದೀಪಿಕಾ ಪಲ್ಲಿಕಲ್ ಹಾಗೂ ಹರಿಂದರ್ ಪಾಲ್ ಸಿಂಗ್ ಜೋಡಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ದೀಪಿಕಾ ಪಲ್ಲಿಕಲ್ ಅವರು ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರ ಪತ್ನಿ.

ಮಲೇಷ್ಯಾವನ್ನು 2-0ಅಂತರದಿಂದ ಮಣಿಸಿ ಭಾರತಕ್ಕೆ 20ನೇ ಚಿನ್ನದ ಪದಕ ದೊರಕಿಸಿಕೊಟ್ಟಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ದೀಪಿಕಾಗೆ ಇದು ಎರಡನೇ ಪದಕವಾಗಿದ್ದು, ಈ ಹಿಂದೆಯೂ ಮಹಿಳಾ ತಂಡದೊಂದಿದೆ ಕಂಚಿನ ಪದಕ ಗಳಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!