ಮಹಿಳೆಯರ 5000 ಮೀಟರ್ ಓಟದಲ್ಲಿ ಭಾರತಕ್ಕೆ ಚಿನ್ನದ ಪದಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕದ ಬೇಟೆ ಮುಂದುವರಿದಿದ್ದು, ಪಾರುಲ್ ಚೌಧರಿ 5000 ಮೀಟರ್​ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದಾರೆ.

ಪಾರುಲ್ ಚೌಧರಿ ಮಹಿಳೆಯರ 5000 ಮೀ ಫೈನಲ್‌ನಲ್ಲಿ 15: 14.75 ಸೆಕೆಂಡ್‌ ಸಮಯದಲ್ಲಿ ಮುಗಿಸಿ ಏಷ್ಯನ್ ಗೇಮ್ಸ್ 2023ರಲ್ಲಿ ಚಿನ್ನದ ಪದಕ ಗೆದ್ದರು. ಈ ವರ್ಷದ ಆರಂಭದಲ್ಲಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ 5000 ಮೀಟರ್ ಬೆಳ್ಳಿ ಗೆದ್ದ 28 ವರ್ಷದ ಪಾರುಲ್, ಜಪಾನ್‌ನ ರಿರಿಕಾವನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದರು.

ವಿತ್ಯಾ ರಾಮರಾಜ್ ಕಂಚು:
400 ಮೀಟರ್ ಹರ್ಲ್ಡ್ಸ್ ಹೀಟ್​ನಲ್ಲಿ ಭಾರತದ ವಿತ್ಯಾ ರಾಮರಾಜ್ ಕಂಚು ಗೆದಿದ್ದಾರೆ. ಮಹಿಳೆಯರ 400 ಮೀಟರ್ ಹರ್ಡಲ್ಸ್ ಫೈನಲ್‌ನಲ್ಲಿ ವಿತ್ಯಾ ರಾಮರಾಜ್ 55.68 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಗೆದ್ದರು. 25 ವರ್ಷದ ಭಾರತೀಯ ಹರ್ಡಲರ್ ಸೋಮವಾರ ನಡೆದ ಹೀಟ್ಸ್‌ನಲ್ಲಿ ಪಿಟಿ ಉಷಾ ಅವರ 400 ಮೀಟರ್ ಹರ್ಡಲ್ಸ್ ರಾಷ್ಟ್ರೀಯ ದಾಖಲೆಯನ್ನು ಸರಿಗಟ್ಟಿದರು.
ಮತ್ತೊಂದೆಡೆ, ಪುರುಷರ 400 ಮೀಟರ್ ಹರ್ಡಲ್ಸ್ ಫೈನಲ್‌ನಲ್ಲಿ ಭಾರತದ ಯಶಸ್ ಪಾಲಾಕ್ಷ ಮತ್ತು ಟಿ ಸಂತೋಷ್ ಕುಮಾರ್ ಕ್ರಮವಾಗಿ ಐದು ಮತ್ತು ಆರನೇ ಸ್ಥಾನ ಪಡೆದರು. ಕತಾರ್‌ನ ಅಬ್ದೆರಹ್ಮಾನ್ ಅಲ್ಸಾಲೆಕ್ ಮತ್ತು ಬಾಸ್ಸೆಮ್ ಹೆಮೇಡಾ ಚಿನ್ನ-ಬೆಳ್ಳಿಯ ಪದಕವನ್ನು ಪಡೆದುಕೊಂಡರೆ, ಚೀನಾದ ಕ್ಸಿ ಝಿಯು ಕಂಚು ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!