Friday, June 2, 2023

Latest Posts

ಚಿನ್ನದ ಬೆಲೆ 800 ರೂ.ಇಳಿಕೆ, ಬೆಳ್ಳಿ 5 ರೂ. ಕುಸಿತ: ಲೇಟೆಸ್ಟ್‌ ರೇಟ್‌ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಇತ್ತೀಚೆಗಷ್ಟೇ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿ ಐತಿಹಾಸಿಕ ಗರಿಷ್ಟ ಮಟ್ಟ ತಲುಪಿದ್ದ ಚಿನ್ನದ ಬೆಲೆಯು ಗುರುವಾರ 800 ರೂ.ಗಳಷ್ಟು ಇಳಿಕೆ ದಾಖಲಿಸಿದೆ. ಗುಡ್‌ರಿಟರ್ನ್ಸ್‌ನ ಅಂಕಿಅಂಶಗಳ ಪ್ರಕಾರ, 22 ಕ್ಯಾರೆಟ್‌ ಒಂದು ಗ್ರಾಂ. ಚಿನ್ನದ ಬೆಲೆಯು 5,420 ರೂ. ಗೆ ತಲುಪಿದ್ದು ಇದು ಬುಧವಾರ 5,500 ರೂ.ಗಳಷ್ಟಿತ್ತು. ಎಂಟು ಗ್ರಾಂ ಮತ್ತು 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆಯೂ 640 ರೂ. ಮತ್ತು 800 ರೂ. ಇಳಿಕೆಯಾಗಿದ್ದು, ಈಗ ಕ್ರಮವಾಗಿ 43,360 ರೂ. ಮತ್ತು 54,200 ರೂ. ಆಗಿದೆ.

24 ಕ್ಯಾರೆಟ್ ಚಿನ್ನದ ಬೆಲೆ ಗುರುವಾರ ಕುಸಿತ ಕಂಡಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 5,913 ರೂ.ಗಳಷ್ಟಿದ್ದರೆ ಎಂಟು ಗ್ರಾಂ ಮತ್ತು 10 ಗ್ರಾಂ ಕ್ರಮವಾಗಿ 47,304 ರೂ. ಮತ್ತು 59,130 ​​ರೂ.ಗಳಷ್ಟಿದೆ. 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 5,91,300 ರೂ.ಗಳಷ್ಟಾಗಿದೆ.

ಏತನ್ಮಧ್ಯೆ, ಗುರುವಾರ ಬೆಳ್ಳಿಯ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಬುಧವಾರದಂದು 72 ರೂ. ಇದ್ದ ಒಂದು ಗ್ರಾಂ ಬೆಳ್ಳಿಯ ಬೆಲೆ 71.60 ರೂ.ಗೆ ಕುಸಿದಿದೆ. ಅದೇ ರೀತಿ ಎಂಟು ಗ್ರಾಂ ಬೆಳ್ಳಿಯ ಬೆಲೆ 4 ರೂ. ಇಳಿಕೆಯಾಗಿ 572.80 ರೂ. ಆಗಿದೆ. 10 ಗ್ರಾಂ ಬೆಳ್ಳಿ 716 ರೂ.ಗೆ ಲಭ್ಯವಿದ್ದರೆ, ಒಂದು ಕೆಜಿ ಬೆಳ್ಳಿ 71,600 ರೂ.ಗೆ ಲಭ್ಯವಿದ್ದು ನಿನ್ನೆಗಿಂತ 500 ರೂ. ಇಳಿಕೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!