ವಿಜಯ್ ಮಲ್ಯ ಬಳಿ ಸಾಲ ತೀರಿಸುವಷ್ಟು ಆಸ್ತಿ ಇದೆ, ಸಿಬಿಐ ಮಾಹಿತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಜಯ್ ಮಲ್ಯ ಆಸ್ತಿ ಮೊತ್ತ ಒಟ್ಟು 7,500 ಕೋಟಿ ರೂಪಾಯಿಗಳಾಗಿದ್ದು, ಒಟ್ಟಾರೆ ಸಾಲ ತೀರಿಸೋವಷ್ಟು ಆಸ್ತಿ ಅವರ ಬಳಿ ಇದೆ ಎಂದು ಕೇಂದ್ರೀಯ ತನಿಖಾ ದಳ ತಿಳಿಸಿದೆ.

ಕಿಂಗ್‌ಫಿಶರ್ ಏರ್‌ಲೈನ್ಸ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಮೂರನೇ ಪೂರಕ ಚಾರ್ಜ್ ಶೀಟ್‌ನಲ್ಲಿ ಮಾಹಿತಿ ನೀಡಿದ್ದು, ಬ್ಯಾಂಕ್ ಸಾಲ ತೀರಿಸುವಷ್ಟು ಆಸ್ತಿ ಅವರ ಬಳಿ ಇದೆ ಎಂದು ಸಿಬಿಐ ಹೇಳಿದೆ.

ಕಿಂಗ್‌ಫಿಶರ್ ಏರ್‌ಲೈನ್ಸ್ ನಗದು ಕೊರತೆಯನ್ನು ಎದುರಿಸುತ್ತಿದ್ದಾಗ ಉದ್ಯಮಿ ವಿಜಯ್ ಮಲ್ಯ ಇಂಗ್ಲೆಂಡ್ ಹಾಗೂ ಫ್ರಾನ್ಸ್‌ನಲ್ಲಿ 330 ಕೋಟಿ ಮೌಲ್ಯದ ಆಸ್ತಿ ಖರೀದಿ ಮಾಡಿದ್ದಾರೆ. ಐಡಿಬಿಐ ಬ್ಯಾಂಕ್-ಕಿಂಗ್‌ಫಿಶರ್ ಏರ್‌ಲೈನ್ಸ್ ಸಾಲ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಲ್ಯ ಬಳಿ ಸಾಕಷ್ಟು ಹಣ ಇದೆ ಎಂದು ಸಿಬಿಐ ಹೇಳಿದೆ.

ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಸುಮಾರು 44 ಮದ್ಯ ಘಟಕಗಳನ್ನು ಸ್ಥಾಪಿಸಿ ಯೂರೋಪಿನಾದ್ಯಂತ ಹಲವು ಆಸ್ತಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ಸಿಬಿಐ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!