March 18, 2026
Wednesday, March 18, 2026
spot_img

Gold Rate | ವಾರವಿಡೀ ಇಳಿಕೆ, ವಾರಾಂತ್ಯದಲ್ಲಿ ಏರಿಕೆ: ಚಿನ್ನದ ದರದಲ್ಲಿ ಭಾರಿ ಏರುಪೇರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾರದ ಆರಂಭದಿಂದಲೂ ಸತತ ಕುಸಿತ ಕಂಡು ಹರ್ಷ ತಂದಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು, ವಾರಾಂತ್ಯದ ಹೊತ್ತಿಗೆ ಗ್ರಾಹಕರಿಗೆ ಶಾಕ್ ನೀಡಿವೆ. ಜಾಗತಿಕ ಮಾರುಕಟ್ಟೆಯ ಏರಿಳಿತದ ಪರಿಣಾಮವಾಗಿ ಭಾರತದಲ್ಲೂ ಬೆಲೆಗಳು ದಿಢೀರ್ ಏರಿಕೆ ಕಂಡಿದ್ದು, ಆಭರಣ ಪ್ರಿಯರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ.

ಒಂದೇ ದಿನದಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆ 300 ರೂ.ಗಳಿಗೂ ಅಧಿಕ ಏರಿಕೆ ಕಂಡಿದೆ. ಪ್ರಮುಖವಾಗಿ ಆಭರಣ ಚಿನ್ನದ ಬೆಲೆ ಮತ್ತೆ 14,000 ರೂ.ಗಳ ಗಡಿಯನ್ನು ದಾಟಿ ಮುನ್ನುಗ್ಗುತ್ತಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ಬೆಲೆ 1,43,550 ರೂ. ತಲುಪಿದ್ದರೆ, ಬೆಳ್ಳಿಯ ದರ ಪ್ರತಿ 100 ಗ್ರಾಂಗೆ 28,500 ರೂ. ಆಗಿದೆ. ನೆರೆಯ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲೂ ಬೆಳ್ಳಿಯ ಬೆಲೆ ಇದೇ ಮಟ್ಟದಲ್ಲಿ ಮುಂದುವರಿದಿದೆ.

ಇದನ್ನೂ ಓದಿ:

ವಿದೇಶಿ ಮಾರುಕಟ್ಟೆಯಲ್ಲೂ ಬೆಲೆ ಏರಿಕೆ ಪ್ರವೃತ್ತಿ ಕಂಡುಬಂದಿರುವುದು ಭಾರತೀಯ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದೆ. ವಾರಾಂತ್ಯದ ಈ ಹಠಾತ್ ಏರಿಕೆಯು ಮದುವೆ ಮತ್ತು ಶುಭ ಸಮಾರಂಭಗಳಿಗೆ ಚಿನ್ನ ಖರೀದಿಸಲು ಯೋಜಿಸುತ್ತಿದ್ದವರಿಗೆ ತುಸು ಆತಂಕ ತಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !