September 25, 2026
Friday, September 25, 2026
spot_img

Gold Rate | ವಾರವಿಡೀ ಇಳಿಕೆ, ವಾರಾಂತ್ಯದಲ್ಲಿ ಜಿಗಿತ: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಪರ್ವ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ವಾರದ ಆರಂಭದಲ್ಲಿ ಸತತವಾಗಿ ಇಳಿಕೆ ಕಾಣುತ್ತಿದ್ದ ಚಿನ್ನದ ದರದಲ್ಲಿ ಈಗ ಮತ್ತೆ ಏರಿಕೆ ಕಂಡುಬಂದಿದೆ. ಮೊದಲ ಐದು ದಿನಗಳ ಕಾಲ ಗ್ರಾಹಕರಿಗೆ ಸಮಾಧಾನ ತಂದಿದ್ದ ಬೆಲೆಗಳು, ವಾರಾಂತ್ಯದ ವೇಳೆಗೆ ದಿಢೀರನೆ 230 ರೂ. ಏರಿಕೆ ಕಂಡು ಅಚ್ಚರಿ ಮೂಡಿಸಿವೆ. ಜಾಗತಿಕ ಮಟ್ಟದಲ್ಲೂ ಇದೇ ರೀತಿಯ ಏರಿಳಿತಗಳು ಮುಂದುವರಿದಿವೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಈ ಕೆಳಗಿನಂತಿವೆ:

22 ಕ್ಯಾರೆಟ್ ಚಿನ್ನ (10 ಗ್ರಾಂ): 1,50,000 ರೂ.

24 ಕ್ಯಾರೆಟ್ ಚಿನ್ನ (10 ಗ್ರಾಂ): 1,63,640 ರೂ.

ಬೆಳ್ಳಿ (100 ಗ್ರಾಂ): 28,500 ರೂ. (ಬೆಂಗಳೂರಿನಲ್ಲಿ)

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಹಾಗೂ ತೈಲ ಬಿಕ್ಕಟ್ಟಿನಂತಹ ಜಾಗತಿಕ ಸಮಸ್ಯೆಗಳು ಸಾಮಾನ್ಯವಾಗಿ ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಆದರೆ, ಈ ಬಾರಿ ಈ ಬೆಳವಣಿಗೆಗಳು ಮಾರುಕಟ್ಟೆಯ ಮೇಲೆ ಅಂತಹ ದೊಡ್ಡ ಪ್ರಭಾವ ಬೀರಿದಂತೆ ತೋರುತ್ತಿಲ್ಲ.

ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 28,500 ರೂಪಾಯಿಗಳಷ್ಟಿದ್ದರೆ, ನೆರೆಯ ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ ಬೆಳ್ಳಿಯ ಬೆಲೆ 100 ಗ್ರಾಂಗೆ 29,000 ರೂ. ತಲುಪಿದೆ. ಚಿನ್ನದ ಬೆಲೆ ಏರುತ್ತಿದ್ದರೂ, ಬೆಳ್ಳಿ ಮಾತ್ರ ತನ್ನ ಸ್ಥಿರತೆಯನ್ನು ಕಾಯ್ದುಕೊಂಡಿದೆ.

Must Read