August 24, 2026
Monday, August 24, 2026
spot_img

Gold Rate | ಚಿನ್ನ-ಬೆಳ್ಳಿ ದರದಲ್ಲಿ ‘ರಾಕೆಟ್’ ವೇಗ: ಅಪರಂಜಿ ಈಗ ಮತ್ತಷ್ಟು ದುಬಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ವಾರಾಂತ್ಯದಲ್ಲಿ ಏರಿಕೆ ಕಂಡಿದ್ದ ಚಿನ್ನದ ಬೆಲೆ, ವಾರದ ಆರಂಭದಲ್ಲೂ ತನ್ನ ಅಬ್ಬರ ಮುಂದುವರಿಸಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತದ ನಡುವೆ, ಸ್ಥಳೀಯವಾಗಿಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.

ಇಂದು ಪ್ರತಿ ಗ್ರಾಮ್ ಚಿನ್ನಕ್ಕೆ 205 ರೂ. ಏರಿಕೆಯಾಗಿದ್ದು, ಹೂಡಿಕೆದಾರರು ಮತ್ತು ಗ್ರಾಹಕರಲ್ಲಿ ಆತಂಕ ಮೂಡಿಸಿದೆ.

22 ಕ್ಯಾರಟ್ ಚಿನ್ನ (10 ಗ್ರಾಮ್): 1,45,600 ರೂ.

24 ಕ್ಯಾರಟ್ ಅಪರಂಜಿ ಚಿನ್ನ (10 ಗ್ರಾಮ್): 1,58,840 ರೂ. (ಇದು ಸದ್ಯದಲ್ಲೇ 1.60 ಲಕ್ಷದ ಗಡಿ ತಲುಪುವ ಲಕ್ಷಣ ತೋರುತ್ತಿದೆ).

ಚಿನ್ನಕ್ಕೆ ಪೈಪೋಟಿ ನೀಡುವಂತೆ ಬೆಳ್ಳಿಯ ಬೆಲೆಯೂ ಗಗನಕ್ಕೇರುತ್ತಿದೆ. ಇಂದು ಒಂದೇ ದಿನ ಪ್ರತಿ ಗ್ರಾಮ್‌ಗೆ 15 ರೂ. ಏರಿಕೆಯಾಗಿದ್ದು, ಪ್ರಸ್ತುತ ಒಂದು ಗ್ರಾಮ್ ಬೆಳ್ಳಿ ಬೆಲೆ 300 ರೂ. ತಲುಪಿದೆ. ಇದರೊಂದಿಗೆ 100 ಗ್ರಾಮ್ ಬೆಳ್ಳಿಯ ಬೆಲೆ 30,000 ರೂ. ಆಗಿದೆ.

ಬೆಂಗಳೂರು ಮಾತ್ರವಲ್ಲದೆ ತಮಿಳುನಾಡು ಮತ್ತು ಕೇರಳದ ಪ್ರಮುಖ ನಗರಗಳಲ್ಲಿಯೂ ಬೆಳ್ಳಿಯ ಬೆಲೆ 100 ಗ್ರಾಮ್‌ಗೆ 30,000 ರೂ. ಆಸುಪಾಸಿನಲ್ಲಿದೆ. ವಿದೇಶಿ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆಯ ಪ್ರಭಾವ ಭಾರತೀಯ ಮಾರುಕಟ್ಟೆಯ ಮೇಲೂ ನೇರವಾಗಿ ಬಿದ್ದಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !