October 9, 2026
Friday, October 9, 2026
spot_img

Gold Rate | ಗ್ರಾಹಕರಿಗೆ ಸಮಾಧಾನ ತಂದ ಸೋಮವಾರ: ಇಳಿಕೆಯತ್ತ ಚಿನ್ನ, ಬೆಳ್ಳಿಯ ನಡಿಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲವು ದಿನಗಳಿಂದ ಗಗನಕ್ಕೇರುತ್ತಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಂದು ಕೊಂಚ ಇಳಿಕೆ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತಗಳ ಹಿನ್ನೆಲೆಯಲ್ಲಿ, ಇಂದು ಸೋಮವಾರ ಪ್ರತಿ ಗ್ರಾಮ್ ಚಿನ್ನದ ಬೆಲೆಯಲ್ಲಿ 35 ರೂಪಾಯಿ ಇಳಿಕೆಯಾಗಿದೆ. ಚಿನ್ನದ ಜೊತೆಗೆ ಬೆಳ್ಳಿಯ ಬೆಲೆಯೂ ತಗ್ಗಿದ್ದು, ಪ್ರತಿ ಗ್ರಾಮ್‌ಗೆ 5 ರೂಪಾಯಿ ಕಡಿಮೆಯಾಗಿದೆ.

ಇಂದಿನ ಮಾರುಕಟ್ಟೆ ದರ ಹೀಗಿದೆ:

22 ಕ್ಯಾರಟ್ ಚಿನ್ನ (ಆಭರಣ ಚಿನ್ನ): 10 ಗ್ರಾಮ್‌ಗೆ 1,39,750 ರೂಪಾಯಿ.

24 ಕ್ಯಾರಟ್ ಚಿನ್ನ (ಅಪರಂಜಿ ಚಿನ್ನ): 10 ಗ್ರಾಮ್‌ಗೆ 1,52,460 ರೂಪಾಯಿ.

ಬೆಳ್ಳಿ ಬೆಲೆ: ಬೆಂಗಳೂರಿನಲ್ಲಿ 100 ಗ್ರಾಮ್ ಬೆಳ್ಳಿಯ ಬೆಲೆ 25,500 ರೂಪಾಯಿ ತಲುಪಿದೆ.

ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ 25,500 ರೂಪಾಯಿ ಇದ್ದರೆ, ನೆರೆಯ ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ ಬೆಳ್ಳಿಯ ಬೆಲೆ 100 ಗ್ರಾಮ್‌ಗೆ 26,000 ರೂಪಾಯಿಗಳಷ್ಟಿದೆ. ಮಾರುಕಟ್ಟೆಯಲ್ಲಿನ ಈ ಸಣ್ಣ ಮಟ್ಟದ ಇಳಿಕೆಯು ಆಭರಣ ಖರೀದಿದಾರರಲ್ಲಿ ಹೊಸ ಆಸೆ ಮೂಡಿಸಿದೆ.

Must Read