October 8, 2026
Thursday, October 8, 2026

Gold Rate | ಯುದ್ಧದ ಎಫೆಕ್ಟ್? ಪಾತಾಳಕ್ಕೆ ಕುಸಿದ ಅಪರಂಜಿ ಚಿನ್ನ, ಬೆಳ್ಳಿ ಬೆಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶಾದ್ಯಂತ ಹಳದಿ ಲೋಹದ ಬೆಲೆಯಲ್ಲಿ ಸತತ ಇಳಿಕೆಯ ಟ್ರೆಂಡ್ ಮುಂದುವರಿದಿದೆ. ವಾರಾಂತ್ಯದ ಅಲ್ಪ ಕುಸಿತದ ಬೆನ್ನಲ್ಲೇ, ಇಂದು ಕೂಡ ಚಿನ್ನದ ದರದಲ್ಲಿ ಪ್ರತಿ 10 ಗ್ರಾಂಗೆ 130 ರೂಪಾಯಿಗಳಷ್ಟು ಕಡಿತವಾಗಿದೆ. ಜಾಗತಿಕ ರಾಜಕೀಯ ವಿದ್ಯಮಾನಗಳು ಹಾಗೂ ಇರಾನ್ ಯುದ್ಧದ ಪರಿಣಾಮಗಳು ಚಿನ್ನದ ಮಾರುಕಟ್ಟೆಯ ಮೇಲೆ ತೀವ್ರ ಪ್ರಭಾವ ಬೀರಿದ್ದು, ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

5 ತಿಂಗಳಲ್ಲಿ 3,500 ರೂಪಾಯಿ ಕಡಿತ!

ಕಳೆದ ಐದಾರು ತಿಂಗಳುಗಳಿಂದ ಚಿನ್ನದ ಗ್ರಾಫ್ ಗಣನೀಯವಾಗಿ ಕೆಳಗಿಳಿಯುತ್ತಿದೆ. ಜನವರಿ ಕೊನೆಯಲ್ಲಿ 17,885 ರೂಪಾಯಿ ಇದ್ದ ಅಪರಂಜಿ ಚಿನ್ನದ ದರ, ಈಗ ಮೂರೂವರೆ ಸಾವಿರಕ್ಕೂ ಹೆಚ್ಚು ರೂಪಾಯಿ ಇಳಿಕೆ ಕಂಡು ಗ್ರಾಹಕರಿಗೆ ನೆಮ್ಮದಿ ತಂದಿದೆ.

ಇಂದಿನ ಚಿನ್ನ ಮತ್ತು ಬೆಳ್ಳಿ ದರ ವಿವರ

ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಆಭರಣ ಚಿನ್ನ ಹಾಗೂ ಬೆಳ್ಳಿಯ ಇಂದಿನ ಲೇಟೆಸ್ಟ್ ದರಗಳು ಹೀಗಿವೆ:

  • 22 ಕ್ಯಾರೆಟ್ ಚಿನ್ನ (10 ಗ್ರಾಂ): 1,31,000 ರೂಪಾಯಿ.
  • 24 ಕ್ಯಾರೆಟ್ ಅಪರಂಜಿ ಚಿನ್ನ (10 ಗ್ರಾಂ): 1,42,910 ರೂಪಾಯಿ (ಜನವರಿಯಲ್ಲಿ ಇದು 17,885 ರೂ. ಆಸುಪಾಸಿನಲ್ಲಿತ್ತು).
  • ಬೆಳ್ಳಿ ದರ (100 ಗ್ರಾಂ): 23,500 ರೂಪಾಯಿ.

Must Read