August 3, 2026
Monday, August 3, 2026
spot_img

Gold Rate | ಇಂದು ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ? ಆಭರಣ ಖರೀದಿಗೆ ಮುನ್ನ ದರ ಪಟ್ಟಿ ಗಮನಿಸಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲವು ದಿನಗಳಿಂದ ಏರಿಕೆ ಹಾದಿಯಲ್ಲಿದ್ದ ಚಿನ್ನದ ಬೆಲೆ ಈಗ ಗ್ರಾಹಕರಿಗೆ ನಿರಾಳ ತಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳ ಪರಿಣಾಮವಾಗಿ ಭಾರತೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತವಾಗಿ ಇಳಿಕೆ ಕಾಣುತ್ತಿವೆ.

ಗುರುವಾರ ಪ್ರತಿ ಗ್ರಾಮ್‌ ಚಿನ್ನದ ಬೆಲೆಯಲ್ಲಿ 500 ರೂಪಾಯಿಗೂ ಅಧಿಕ ಇಳಿಕೆಯಾಗಿದ್ದು, ಇಂದು ಶುಕ್ರವಾರ ಮತ್ತೆ 205 ರೂಪಾಯಿ ತಗ್ಗಿದೆ. ಒಟ್ಟಾರೆಯಾಗಿ ಕಳೆದ ಎರಡು ದಿನಗಳಲ್ಲಿ ಚಿನ್ನದ ಬೆಲೆ 700 ರೂಪಾಯಿಗೂ ಹೆಚ್ಚು ಕಡಿಮೆಗೊಂಡಿದೆ. ವಿದೇಶಿ ಮಾರುಕಟ್ಟೆಗಳಲ್ಲಿಯೂ ಚಿನ್ನದ ದರ ಅಲ್ಪ ಪ್ರಮಾಣದ ಇಳಿಕೆ ಕಂಡಿರುವುದು ಸ್ಥಳೀಯ ದರಗಳ ಮೇಲೆ ಪ್ರಭಾವ ಬೀರಿದೆ.

ಇಂದಿನ ಬೆಲೆ ವಿವರಗಳು (10 ಗ್ರಾಮ್‌ಗೆ):

22 ಕ್ಯಾರಟ್ ಆಭರಣ ಚಿನ್ನ: 1,46,750 ರೂಪಾಯಿ.

24 ಕ್ಯಾರಟ್ ಅಪರಂಜಿ ಚಿನ್ನ: 1,60,090 ರೂಪಾಯಿ.

ಚಿನ್ನದ ಹಾದಿಯನ್ನೇ ಅನುಸರಿಸಿರುವ ಬೆಳ್ಳಿಯು ಸಹ ಸತತ ಎರಡನೇ ಬಾರಿಗೆ ಇಳಿಕೆ ಕಂಡಿದೆ. ಇಂದು ಬೆಳ್ಳಿಯ ಬೆಲೆ 10 ರೂಪಾಯಿ ಇಳಿಕೆಯಾಗಿದ್ದು, ಕಳೆದ ಎರಡು ದಿನಗಳಲ್ಲಿ ಒಟ್ಟು 20 ರೂಪಾಯಿ ಕಡಿಮೆಗೊಂಡಿದೆ. ಈ ಮೂಲಕ ಬೆಳ್ಳಿಯ ದರವು ಮತ್ತೆ 300 ರೂಪಾಯಿ ಗಡಿಯೊಳಗೆ ಬಂದಂತಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !