October 15, 2026
Thursday, October 15, 2026
spot_img

ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌ : ಚಿನ್ನ,ಬೆಳ್ಳಿಯಲ್ಲಿ ಭರ್ಜರಿ ಇಳಿಕೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಆಭರಣ ಪ್ರಿಯರಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಕೆಲವು ದಿನಗಳಿಂದ ಏರಿಳಿತ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಕೊಂಚ ಇಳಿಕೆ ಕಂಡಿದ್ದು, ಬೆಳ್ಳಿ ಬೆಲೆಯಲ್ಲೂ ಕೂಡ ಭರ್ಜರಿ ಇಳಿಕೆ ಆಗಿದೆ.

ನಿನ್ನೆ ಒಂದು ಗ್ರಾಂಗೆ 120 ರೂ. ಇಳಿದಿದ್ದ ಬಂಗಾರದ ದರವು ಇಂದು 40 ರೂ. ತಗ್ಗಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಚಿನ್ನದ ಬೆಲೆ ಗ್ರಾಂಗೆ 10 ರೂ.ನಷ್ಟು ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,36,750 ರೂ. ಇದ್ದು, 24 ಕ್ಯಾರಟ್ ಚಿನ್ನದ ಬೆಲೆ 1,49,180 ರೂ. ಆಗಿದೆ.

ಇನ್ನು, ಒಂದು ಗ್ರಾಂ ಬೆಳ್ಳಿಯ ಬೆಲೆ ₹255ರಷ್ಟಿದ್ದು, ನಿನ್ನೆಯ ದರಕ್ಕೆ ಹೋಲಿಸಿದರೆ ಪ್ರತಿ ಗ್ರಾಂಗೆ 110ರಷ್ಟು ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿಯ ದರವು ₹2,55,000ಕ್ಕೆ ತಲುಪಿದ್ದು, ನಿನ್ನೆಗಿಂತ ಒಂದು ಕೆಜಿ ಬೆಳ್ಳಿಯ ಮೇಲೆ ಬರೋಬ್ಬರಿ ₹10,000 ರೂ.ಗಳಷ್ಟು ಬೆಲೆ ಇಳಿಕೆಯಾಗಿದೆ.

Must Read