Tuesday, May 30, 2023

Latest Posts

ಚಿನ್ನ-ಬೆಳ್ಳಿ ದರ ಏರಿಕೆ: ಲೇಟೆಸ್ಟ್‌ ರೇಟ್‌ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಶುಕ್ರವಾರದಂದು ಮಾರುಕಟ್ಟೆಯಲ್ಲಿ ಚಿನ್ನ ಹಾಗು ಬೆಳ್ಳಿ ದರಗಳು ತುಸು ಏರಿಕೆಯಾಗಿದೆ.

ಗುಡ್‌ರಿಟರ್ನ್ಸ್ ಡೇಟಾ ಪ್ರಕಾರ 22-ಕ್ಯಾರೆಟ್ ಮತ್ತು 24-ಕ್ಯಾರೆಟ್ ಚಿನ್ನದ ಬೆಲೆಗಳಲ್ಲಿ ಏರಿಕೆ ಕಂಡುಬಂದಿದ್ದು ಹಿಂದಿನ ದಿನಕ್ಕೆ ಹೋಲಿಸಿದರೆ ಇವುಗಳ 1 ಗ್ರಾಂ 22-ಕ್ಯಾರೆಟ್ ಚಿನ್ನದ ಬೆಲೆ 30ರೂ. ಮತ್ತು 24-ಕ್ಯಾರೆಟ್ ಚಿನ್ನದ ಬೆಲೆ 33ರೂ. ಹೆಚ್ಚಿದೆ. ಅದೇ ರೀತಿ 8 ಗ್ರಾಂ ಮತ್ತು 10 ಗ್ರಾಂ ಚಿನ್ನದ ಬೆಲೆಗಳು ಕ್ರಮವಾಗಿ 44,000 ರೂ. ಮತ್ತು 55,000 ರೂ.ಗಳಷ್ಟಿದ್ದು ಹಿಂದಿನ ದಿನದ ದರಕ್ಕೆ ಹೋಲಿಸಿದರೆ 240ರೂ. ಮತ್ತು 300ರೂ. ಏರಿಕೆಯಾಗಿದೆ. ಏತನ್ಮಧ್ಯೆ, ಬೆಳ್ಳಿಯ ಬೆಲೆ ಹಿಂದಿನ ದಿನಕ್ಕಿಂತ 0.7ರೂ. ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಶುಕ್ರವಾರ, ಬೆಳ್ಳಿ ಪ್ರತಿ ಗ್ರಾಂಗೆ 74 ರೂ.ಗಳಷ್ಟಾಗಿದ್ದು ಇದು ಗುರುವಾರ 73.30 ರೂ.ನಿಂದ ಏರಿಕೆಯಾಗಿದೆ. ಅರ್ಥಾತ್‌ ಒಂದು ಕಿಲೋಗ್ರಾಂ ಬೆಳ್ಳಿಗೆ ಗ್ರಾಹಕರು 74,000 ರೂ.ಪಾವತಿಸಬೇಕಾಗುತ್ತದೆ.

ಮೇಲೆ ತಿಳಿಸಿದ ದರಗಳು GST, TCS ಮತ್ತು ಹೆಚ್ಚುವರಿ ಶುಲ್ಕಗಳನ್ನು ಒಳಗೊಂಡಿಲ್ಲ. ನಿಖರವಾದ ವೆಚ್ಚಕ್ಕಾಗಿ, ಖರೀದಿದಾರರು ಸ್ಥಳೀಯ ಆಭರಣ ಅಂಗಡಿಗಳನ್ನು ಸಂಪರ್ಕಿಸಿ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!