ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.
ಜಾಮೀನು ಅರ್ಜಿ ಕೋರಿ ನಟಿ ರನ್ಯಾ ಪರ ವಕೀಲರು, ನಗರದ 64ನೇ ಸಿಸಿಹೆಚ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ಮಾಡಿದ ಕೋರ್ಟ್ ವಜಾ ಮಾಡಿ ಆದೇಶ ನೀಡಿದೆ. ಇದರಿಂದ ರನ್ಯಾ ಜೈಲಿನಲ್ಲೇ ಮುಂದುವೆಯಬೇಕಾಗಿದೆ.
ರನ್ಯಾ ಅವರ ಜಾಮೀನು ಅರ್ಜಿಯನ್ನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಹಾಗೂ 64ನೇ ಸಿಸಿಹೆಚ್ ಕೋರ್ಟ್ ಎರಡು ವಜಾ ಮಾಡಿವೆ. ಹೀಗಾಗಿ ರನ್ಯಾ ಅವರು ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಲೇಬೇಕಾದ ಅನಿವಾರ್ಯತೆ ಬಂದಿದೆ.