ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನ ಸಾಗಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟಿ ರನ್ಯಾ ರಾವ್ ಸ್ನೇಹಿತ ತರುಣ್ ರಾಜ್ ಜಾಮೀನು ಅರ್ಜಿ ತೀರ್ಪು ಆದೇಶವನ್ನು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ನಾಳೆಗೆ ಕಾಯ್ದಿರಿಸಿ ಅದೇಶಿಸಿದರು.
ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಇಂದು ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆ ನಡೆಯಿತು.
ವಿಚಾರಣೆ ಆರಂಭವಾದ ವೇಳೆ ಡಿ ಆರ್ ಐ ಪರವಾಗಿ ವಕೀಲ ಮಧು ರಾವ್ ಅವರು ವಾದ ಆರಂಭಿಸಿದರು. ತರುಣ್ ರಾಜ್ ವಿರುದ್ಧ ಲುಕ್ ಔಟ್ ಸರ್ಕ್ಯುಲರ್ ಹೊರಡಿಸಲಾಗಿತ್ತು. ಮಾರ್ಚ್ 8ರಂದು ಭಾರತದಿಂದ ಪರಾರಿ ಆಗಲು ತರುಣ್ ರಾಜ್ ಯತ್ನಿಸಿದ್ದ. ಬೇರೆ ವಿಧಿ ಇಲ್ಲದೆ ತರುಣ್ ರಾಜು ಹೈದರಾಬಾದ್ ನಿಂದ ಬೆಂಗಳೂರಿಗೆ ಬಂದಿದ್ದಾನೆ. ನಾವು ಲುಕ್ ಔಟ್ ಸರ್ಕ್ಯುಲರ್ ಹೊರಡಿಸುವುದರಿಂದ ಬೆಂಗಳೂರಿಗೆ ಬಂದಿದ್ದಾನೆ. ಬಂಧನ ಪ್ರಕ್ರಿಯೆ ಕಾನೂನು ಪ್ರಕಾರ ಮಾಡಲಾಗಿದೆ. ತರುಣ್ ರಾಜ್ ಬಂಧನ ವಿಚಾರದಲ್ಲಿ ಯಾವುದೇ ರೀತಿ ನಿಯಮ ಉಲ್ಲಂಘಿಸಿಲ್ಲ. ತರುಣ್ ರಾಜ್ ಬಂಧನದ ಬಗ್ಗೆ ಅವರ ಸಹೋದರನಿಗೆ ಮಾಹಿತಿ ನೀಡಿದ್ದೆವು. ಏಟು ತರುಣ್ ರಾಜ್ ಅಮೇರಿಕಾದ ಪ್ರಜೆ ಎಂಬುವುದು ತನಿಖೆಯ ಬೆಳೆ ಗೊತ್ತಾಗಿದೆ. 41ಅ ಮತ್ತು ಕಸ್ಟಮ್ಸ್ ಆಕ್ಟಿಗೆ ವ್ಯತ್ಯಾಸ ಇದೆ. ಕಸ್ಟಮ್ಸ್ ನವರು ಪೊಲೀಸ್ ಅಧಿಕಾರಿಗಳಲ್ಲ ಕಸ್ಟಮ್ಸ್ ನಿಯಮ ಪಾಲಿಸಿದ್ದಾರೆ ಎಂದು ವಾದಿಸಿದರು.
ಬಳಿಕ ನ್ಯಾಯಾಧೀಶರು ತರುಣ್ ರಾಜ್ ಜಾಮೀನು ಅರ್ಜಿ ತೀರ್ಪು ನಾಳೆಗೆ ಕಾಯ್ದಿರಿಸಿ ಆದೇಶ ಹೊರಡಿಸಿದರು.