Thursday, March 23, 2023

Latest Posts

ಚಿನ್ನದ ಕಳ್ಳಸಾಗಣೆ ಹಗರಣದ ಆರೋಪಿ ಸ್ವಪ್ನಾ ಸುರೇಶ್‌ ಕೇರಳ ಸಿಎಂ ಭೇಟಿ: ಸ್ಫೋಟಕ ವಾಟ್ಸಾಪ್ ಚಾಟ್‌ ಬಹಿರಂಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕೇರಳದಲ್ಲಿ ಸದ್ದು ಮಾಡಿರುವ ಚಿನ್ನದ ಕಳ್ಳಸಾಗಣೆ ಹಗರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‌ ಅವರನ್ನು ಸಿಎಂ ಪಿಣರಾಯಿ ವಿಜಯನ್‌ ಭೇಟಿಯಾಗಿದ್ದಾರೆ ಎಂದು ಹೇಳಲಾದ ವಾಟ್ಸಾಪ್‌ ಚಾಟ್‌ಗಳು ಬಹಿರಂಗಗೊಂಡಿದೆ.

ಇದೀಗ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಮತ್ತಷ್ಟು ಸಂಕಷ್ಟ ಕಾದಿದೆ ಎನ್ನಲಾಗಿದ್ದು, ವಿಪಕ್ಷಗಳಿಗೆ ಮತ್ತಷ್ಟು ಅಸ್ತ್ರ ಸಿಕ್ಕಿದೆ .

ಆರೋಪಿ ಸ್ವಪ್ನಾ ಸುರೇಶ್ (Swapna Suresh) ತಿರುವನಂತಪುರಂನಲ್ಲಿರುವ ಯುನೈಟೆಡ್ ಅರಬ್ ಎಮಿರೇಟ್ಸ್ (United Arab Emirates) ಕಾನ್ಸುಲೇಟ್‌ನಲ್ಲಿ ಕಾನ್ಸುಲ್ ಜನರಲ್‌ಗೆ (Consul General) ಕಾರ್ಯದರ್ಶಿ ಹುದ್ದೆಯನ್ನು ತ್ಯಜಿಸಿದ ಕಾರಣ ಹಾಗೂ ಇದರ ಹಿನ್ನೆಲೆಯ ಬಗ್ಗೆ ಮಾಹಿತಿ ನೀಡಿದ ವಾಟ್ಸಾಪ್ (WhatsApp) ಸಂಭಾಷಣೆಗಳು ಹೊರಹೊಮ್ಮಿವೆ.

ಜುಲೈ 2019 ರಲ್ಲಿ ಸ್ವಪ್ನಾ ಸುರೇಶ್‌ ಮತ್ತು ಕೇರಳ ಸಿಎಂ (Kerala CM) ಅವರ ಮಾಜಿ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್ (M. Shivshankar) ನಡುವೆ ನಡೆದಿದೆ ಎನ್ನಲಾದ ವಾಟ್ಸ್‌ಆಪ್‌ ಚಾಟ್‌ಗಳುಲೀಕ್ ಆಗಿದ್ದು, ಸದ್ಯ, ಲೈಫ್ ಮಿಷನ್ ಹಗರಣಕ್ಕೆ ಸಂಬಂಧಿಸಿದಂತೆ ಶಿವಶಂಕರ್ ಅವರು ಪ್ರಸ್ತುತ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿದ್ದಾರೆ.

ವಡಕ್ಕಂಚೇರಿ ಲೈಫ್ ಮಿಷನ್ ಭ್ರಷ್ಟಾಚಾರ ಪ್ರಕರಣದಲ್ಲಿ ಪುರಾವೆಯಾಗಿ ಜಾರಿ ನಿರ್ದೇಶನಾಲಯ ಸಲ್ಲಿಸಿದ ಚಾಟ್‌ಗಳಲ್ಲಿ ಈ ಸ್ಫೋಟಕ ವಾಟ್ಸಾಪ್‌ ಚಾಟ್‌ಗಳೂ ಸೇರಿವೆ ಎಂದು ತಿಳಿದುಬಂದಿದೆ. ಈ ಟ್ರಾನ್ಸ್‌ಕ್ರಿಪ್ಟ್‌ ಮುಖ್ಯಮಂತ್ರಿ ಕಚೇರಿ ಮತ್ತು ಉನ್ನತ ಹುದ್ದೆಯಲ್ಲಿರುವ ವ್ಯಕ್ತಿ ಪಿಣರಾಯಿ ವಿಜಯನ್ ಅವರ ಮೇಲೆ ಗಮನ ಸೆಳೆದಿವೆ.

ಸ್ವಪ್ನಾ ಸುರೇಶ್ – ಶಿವಶಂಕರ್ ಚಾಟ್‌ಗಳು ಅವರಿಬ್ಬರ ನಡುವಣ ಸಂಬಂಧದತ್ತ ಬೊಟ್ಟು ಸ್ಪಷ್ಟವಾಗಿ ತೋರಿಸಿವೆ ಎಂದು ಜಾರಿ ನಿರ್ದೇಶನಾಲಯವು ತನ್ನ ರಿಮಾಂಡ್ ವರದಿಯಲ್ಲಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!