ಕೇರಳದ ಕೃಷ್ಣ ದೇಗುಲಕ್ಕೆ ಬಂತು ರೋಬೋಟಿಕ್ ಆನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕೇರಳದ ಕಲ್ಲೆಟ್ಟುಮಕರ ಇರಿಂಜದನಪಿಲ್ಲಿ ಶ್ರೀಕೃಷ್ಣ ದೇವಾಲಯಕ್ಕೆ ರಾಮನ್ ರೋಬೋಟಿಕ್ (Robotic Elephant) ಆನೆ ಸೇರ್ಪಡೆಯಾಗಲಿದೆ.

ಇದುರೋಬೋಟಿಕ್ ಆನೆಯಾಗಿದ್ದುದೇವಾಲಯದ ಉತ್ಸವಗಳಲ್ಲಿ ಬಳಸಲಾಗುತ್ತದೆ ಎಂದು ಕಲ್ಲೆತ್ತುಮಕರ ಇರಿಂಜದನಪಿಲ್ಲಿ ಶ್ರೀಕೃಷ್ಣ ದೇವಸ್ಥಾನ, ತ್ರಿಶೂರ್ ದೇವಸ್ಥಾನದ ಅಧ್ಯಕ್ಷ ರಾಜ್‌ಕುಮಾರ್ ತಿಳಿಸಿದ್ದಾರೆ.
ಸುಮಾರು 11 ಅಡಿ ಎತ್ತರವಿದೆ. ಇದರ ಮೇಲೆ ನಾಲ್ಕು ಜನರು ಮೇಲೆ ಕುಳಿತು ಮೆರವಣಿಗೆಯನ್ನು ನಡೆಸಬಹುದು. ಇದು ಸುರಕ್ಷಿತ ಮತ್ತು ಅತ್ಯಂತ ದುಬಾರಿ ಆನೆಯಾಗಿದೆ.

ಈ ದೇವಾಲಯದ ಆಚರಣೆಗಳ ಮೂಲಭೂತ ಅಂಶವಾಗಿರುವುದರಿಂದ ತಾಂತ್ರಿಕ ಆನೆಯನ್ನು ಇಲ್ಲಿಗೆ ತರಲಾಗಿದೆ ಎಂದು ಆಡಳಿತ ಮಂಡಳಿ ಹೇಳಿದೆ. ಇಲ್ಲಿನ ಆಚರಣೆಗೆ ಆನೆ ಪ್ರಮುಖವಾಗಿರುವುದರಿಂದ ಈ ತಂತ್ರವನ್ನು ಬಳಸಲಾಗಿದೆ.

ಆನೆಯು ದೇವರ ವಾಹನ, ಆನೆಗಳನ್ನು ಮುಖ್ಯವಾಗಿ ದೇವರ ಕೆಲಸಕ್ಕೆ ಉಪಯೋಗಿಸಲಾಗುವುದು ಎಂದು ದೇವಾಲಯದ ಅರ್ಚಕರು ತಿಳಿಸಿದ್ದಾರೆ.

ಇತ್ತೀಚೆಗೆ ಆನೆಗಳಿಂದ ಉಂಟಾಗುವ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ ಮತ್ತು ಆನೆಗಳನ್ನು ಬಾಡಿಗೆ ಪಡೆದರೆ ಬೆಲೆಗಳು ಹೆಚ್ಚು. ಈ ಕಾರಣಕ್ಕೆ ಈಗ ರೋಬೋಟಿಕ್ ಆನೆಗಳನ್ನು ಬಳಸಲಾಗುವುದು. ಇನ್ನೂ ಮುಂದಕ್ಕೆ ದೇವಾಲಯಗಳು ಜೀವಂತ ಆನೆಗಳನ್ನು ಬಳಸುವುದಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!