ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಬಿಗ್ಬಾಸ್ ಗ್ರ್ಯಾಂಡ್ ಓಪನಿಂಗ್ಗೆ ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಮೂರು ಸ್ಪರ್ಧಿಗಳ ಹೆಸರನ್ನು ಅಧಿಕೃತವಾಗಿ ರಾಜಾ ರಾಣಿ ಗ್ರ್ಯಾಂಡ್ ಫಿನಾಲೆಯಲ್ಲಿ ರಿವೀಲ್ ಮಾಡಲಾಗಿದೆ.
ಈಗ ಬಿಗ್ಬಾಸ್ ಮನೆಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ ಈ 4 ಸ್ಪರ್ಧಿಗಳ ಹೆಸರು ರೀವಿಲ್ ಆಗಿದೆ.
ನಾಲ್ಕನೇ ಸ್ಪರ್ಧಿಯಾಗಿ ಬಿಗ್ಬಾಸ್ ಮನೆಗೆ ಗೋಲ್ಡ್ ಸುರೇಶ್ ಎಂಬುವವರು ಎಂಟ್ರಿ ಕೊಟ್ಟಿದ್ದಾರೆ. ಗೋಲ್ಡ್ ಸುರೇಶ್ ಅವರು ಮೈ ತುಂಬಾ ಬಂಗಾರದ ಸರವನ್ನು ಧರಿಸಿಕೊಂಡು ಬಂದಿದ್ದಾರೆ. ಈ ಬಾರಿ ಬಿಗ್ಬಾಸ್ ನಾನೇ ಗೆಲ್ಲುತ್ತೇನೆ ಅಂತ ಚಾಲೆಂಜ್ ಹಾಕಿದ್ದಾರೆ.
ಬಿಗ್ಬಾಸ್ಗೆ ಹೋಗುವ ಮೊದಲ ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗಿದೆ. ಸುಮಾರು ಮೂರ್ನಾಲ್ಕು ವರ್ಷಗಳಿಂದ ವೀಕ್ಷಕರನ್ನ ರಂಜಿಸುತ್ತಾ ಬಂದಿದ್ದ ಸತ್ಯ ಧಾರಾವಾಹಿಯ ಖ್ಯಾತ ನಟಿ ಗೌತಮಿ ಜಾಧವ್ ಅವರು ಎಂಟ್ರಿ ಕೊಟ್ಟಿದ್ದಾರೆ. ಎರಡನೇ ಸ್ಪರ್ಧಿಯಾಗಿ ರಾಜಾ ರಾಣಿ ಗ್ರ್ಯಾಂಡ್ ಫಿನಾಲೆ ವೇದಿಕೆಗೆ ಲಾಯರ್ ಜಗದೀಶ್ ಎಂಟ್ರಿ ಕೊಟ್ಟಿದ್ದಾರೆ. ಮೂರನೇ ಸ್ಪರ್ಧಿಯಾಗಿ ಬಿಗ್ಬಾಸ್ ಮನೆಗೆ ಚೈತ್ರಾ ಕುಂದಾಪುರ ಅವರು ಎಂಟ್ರಿ ಕೊಟ್ಟಿದ್ದಾರೆ.