ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ನಮಗೆ ವರ ಎಂದು ವಿಶ್ವಸಂಸ್ಥೆಯ ಭಾಷಣದಲ್ಲಿ ಇಸ್ರೆಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭಾರತದ ನಕ್ಷೆ ತೋರಿಸಿ ಹೊಗಳಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬೆಂಜಮಿನ್ ನೆತನ್ಯಾಹು ಭಾಷಣ ಮಾಡುತ್ತಾ , ಸೌದಿ ಅರೇಬಿಯಾ, ಜೋರ್ಡಾನ್, ಈಜಿಪ್ಟ್, ಸುಡಾನ್, ಭಾರತ ಮತ್ತು ಯುಎಇ ಸೇರಿದಂತೆ ಇಸ್ರೇಲ್‌ಗೆ ಸ್ನೇಹ ಪರವಾಗಿರುವ ದೇಶಗಳ ಚಿತ್ರವನ್ನು ತೋರಿಸಿ ʼವರʼ ಎಂದು ಬಣ್ಣಿಸಿದ್ದಾರೆ.
ಅದೇ ರೀತಿ ಇರಾನ್,ಇರಾಕ್ ಸಿರಿಯಾ ಮ್ಯಾಪ್ ತೋರಿಸಿ ಶಾಪ ಎಂದು ಹೇಳಿದ್ದಾರೆ.
ನೆತನ್ಯಾಹು ಅವರು ತಮ್ಮ ಭಾಷಣದಲ್ಲಿ, ಇರಾನ್ ಅನ್ನು ಬಹಳ ಸಮಯದವರೆಗೆ ಜಗತ್ತು ಸಮಾಧಾನದಿಂದ ನೋಡಿದೆ. ಆದರೆ ಅದರ ಆಂತರಿಕ ದಮನದ ವಿಚಾರದಲ್ಲಿ ಕುರುಡಾಗಿ ಬಾಹ್ಯ ಆಕ್ರಮಣ ನಡೆಸುತ್ತಿದೆ. ಈ ತುಷ್ಟೀಕರಣ ಕೊನೆಗೊಳ್ಳಬೇಕು ಮತ್ತು ಈಗಲೇ ಕೊನೆಯಾಗಬೇಕು ಎಂದು ಸಿಟ್ಟು ಹೊರಹಾಕಿದರು.
ಟೆಹರಾನ್ ನಿರಂಕುಶಾಧಿಕಾರಿಗಳಿಗೆ ನನ್ನ ಬಳಿ ಸಂದೇಶವಿದೆ. ನೀವು ನಮ್ಮನ್ನು ಹೊಡೆದರೆ, ನಾವು ನಿಮ್ಮನ್ನು ಹೊಡೆಯುತ್ತೇವೆ ಎಂದು ಗುಡುಗಿದರು.
ನೆತನ್ಯಾಹು ಅವರು ಹಿಡಿದ ವರ ನಕ್ಷೆಯು ಇಸ್ರೇಲ್ ಮತ್ತು ಅದರ ಅರಬ್ ಪಾಲುದಾರರ ನಡುವಿನ ಏಕತೆಯ ದೃಷ್ಟಿಯನ್ನು ವಿವರಿಸುತ್ತದೆ. ಹಿಂದೂ ಮಹಾಸಾಗರ ಮತ್ತು ಮೆಡಿಟರೇನಿಯನ್ ಸಮುದ್ರದ ನಡುವಿನ ಭೂ ಸೇತುವೆಯ ಮೂಲಕ ಏಷ್ಯಾ ಮತ್ತು ಯುರೋಪ್‌ನೊಂದಿಗೆ ಸಂಪರ್ಕಿಸುತ್ತದೆ.