ಅಂಗಿಯ ಗುಂಡಿಯೊಳಗಿತ್ತು ಚಿನ್ನ: ಅಕ್ರಮವಾಗಿ ಸಾಗಿಸಿದ ರೂ.6.42 ಲಕ್ಷ ಮೌಲ್ಯದ ಚಿನ್ನ ವಶ

ಹೊಸದಿಗಂತ ವರದಿ,ಮಂಗಳೂರು:

ತೆರಿಗೆ ವಂಚಿಸಿ ವಿಮಾನದ ಮೂಲಕ ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ದುಬೈಯಿಂದ ಮಂಗಳೂರಿಗೆ ಆಗಮಿಸುವ ವಿಮಾನದಲ್ಲಿ ಈ ರೀತಿಯ ಅಕ್ರಮ ಚಿನ್ನ ಸಾಗಾಟ ಪ್ರಕರಣ ಹೆಚ್ಚಾಗಿ ಬೆಳಕಿಗೆ ಬರುತ್ತಿದ್ದು, ಶುಕ್ರವಾರವೂ ಒಂದು ಪ್ರಕರಣವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನದ ನಿಲ್ದಾಣದಲ್ಲಿ ಪತ್ತೆ ಹಚ್ಚಲಾಗಿದೆ.
ಈ ಬಾರಿ ಪುಟ್ಟ ಮಕ್ಕಳ ಅಂಗಿಯ ಗುಂಡಿಗಳಲ್ಲಿ ಬರೋಬ್ಬರಿ ರೂ.6,42,320 ಮೌಲ್ಯದ 129.500 ಗ್ರಾಂ ಚಿನ್ನವನ್ನು ಸಾಗಾಟ ಮಾಡಲಾಗುತ್ತಿತ್ತು. ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ವೇಳೆ ಅಕ್ರಮ ಸಾಗಾಟ ಬಯಲಾಗಿದೆ. ನೋಡಲು ಸ್ಟೀಲ್ ಬಟನ್‌ನಂತಿರುವ ಅಂಗಿಯ ಗುಂಡಿಗಳ ಒಳಭಾಗದಲ್ಲಿ ಚಿನ್ನವನ್ನು ಬಚ್ಚಿಡಲಾಗಿತ್ತು. ಹಲವು ಅಂಗಿಗಳಲ್ಲಿ ಈ ರೀತಿ ಬಟನ್‌ಗಳಲ್ಲಿ ಚಿನ್ನ ಅಡಗಿಸಿಟ್ಟು ಸಾಗಾಟ ಮಾಡಲಾಗುತ್ತಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!