ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಗ್ರಿ:
ಮೈದಾ ಹಿಟ್ಟು 1 ಕಪ್
ಅಕ್ಕಿ ಹಿಟ್ಟು 2 ಚಮಚ
ಸಣ್ಣಗೆ ಹೆಚ್ಚಿದ ಶುಂಠಿ
ಸಣ್ಣಗೆ ಹೆಚ್ಚಿದ ಕೊಬ್ಬರಿ
ಹೆಚ್ಚಿದ ಹಸಿಮೆಣಸಿನಕಾಯಿ ಕೊತ್ತಂಬರಿ ಸೊಪ್ಪು
ಕರಿಬೇವು, ಕಾಳುಮೆಣಸು ಒಂದು ಟೀ ಸ್ಪೂನ್
ಮಾಡುವ ವಿಧಾನ:
ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಕಲಸಿಟ್ಟುಕೊಳ್ಳಿ. ರುಚಿಗೆ ಬೇಕಾದಷ್ಟು ಉಪ್ಪು ಸೇರಿಸಿ. ಅರ್ಧಕಪ್ ಹುಳಿಮೊಸರು, ಒಂದು ಟೀ ಸ್ಪೂನ್ ಸಕ್ಕರೆ, ಅಡುಗೆ ಸೋಡಾ, ಸ್ವಲ್ಪ ನೀರು ಸೇರಿಸಿ ಮತ್ತೊಮ್ಮೆ ಹದವಾಗಿ ಕಲಸಿ ಅರ್ಧಗಂಟೆಗಳ ಕಾಲ ಬಿಡಿ. ಬಿಸಿ ಎಣ್ಣೆಯಲ್ಲಿ ಸಣ್ಣ ಉಂಡೆಗಳನ್ನು ಮಾಡಿ ಕರಿಯಿರಿ. ಬಿಸಿ ಬಿಸಿ ಗೋಳಿಬಜೆ ಸವಿಯಲು ಬಲುರುಚಿ.