GOOD FOOD| ಬೇಸಿಗೆಯಲ್ಲಿ ಬಳಸಿ ಕರಬೂಜ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೇಸಿಗೆಯಲ್ಲಿ ಕರಬೂಜ ಬಳಕೆ ಬಹು ಉತ್ತಮ. ನಿಮ್ಮ ದೈನಂದಿನ ಮೆನ್ಯೂನಲ್ಲಿ ಕರಬೂಜವನ್ನು ಸೇರಿಸಿಕೊಳ್ಳಿ. ಇದೊಂದು ಆರೋಗ್ಯಕರ ಕಾಲೋಚಿತ ಹಣ್ಣು. ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಉತ್ತಮ ವಿಟಮಿನ್‌, ಖನಿಜಾಂಶ, ಆಂಟಿ ಆಕ್ಸಿಡೆಂಟ್‌ ಇರುವ ಈ ಹಣ್ಣು ದೇಹಾರೋಗ್ಯ ಹೆಚ್ಚಿಸುತ್ತದೆ.

ವಿಟಮಿನ್‌ ಸಿ ಹೇರಳವಾಗಿರುವ ಈ ಹಣ್ಣು ಸೇವನೆಯಿಂದ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಸುಲಭವಾಗಿ ಹೊಟ್ಟೆಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಕರಬೂಜ ಹಣ್ಣು ಮಾಡುತ್ತದೆ. ಇಂದು ಮಲಬದ್ಧತೆ ದೊಡ್ಡ ಸಮಸ್ಯೆಯಾಗಿದೆ. ಕರಬೂಜ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಕಾರ್ಯವನ್ನು ಇದೇ ಕರಬೂಜ ಯಶಸ್ವಿಯಾಗಿ ಮಾಡುತ್ತದೆ. ಇದರಲ್ಲಿ ನೀರಿನಂಶ ಹಾಗೂ ಫೈಬರ್‌ ಸಮೃದ್ಧವಾಗಿದ್ದು, ಜೀರ್ಣಕ್ರಿಯೆಯನ್ನು ಸುಗಮಗೊಳಿಸಲು ಸಹಕರಿಸುತ್ತದೆ. ಕ

ರಬೂಜ ಹಣ್ಣಿನ ತಿರುಳು ಮತ್ತು ಬೀಜಗಳ ಪೇಸ್ಟ್‌ ತಯಾರಿಸಿ ಫೇಸ್‌ ಮಾಸ್ಕ್‌ ರೀತಿ ಬಳಸಬಹುದಾಗಿದೆ. ಚರ್ಮವನ್ನು ಕಾಂತಿ ಭರಿತವಾಗಿಸಲು ಇದು ಸಹಕಾರಿಯಾಗುತ್ತದೆ. ರಕ್ತದೊತ್ತಡವನ್ನು ನಿವಾರಿಸುವ ಅದ್ಭುತ ಶಕ್ತಿ ಈ ಹಣ್ಣಿಗಿದೆ. ಉತ್ತಮ ಪೊಟ್ಯಾಶಿಯಮ್‌ ಭರಿತ ಹಣ್ಣು ಇದಾಗಿದ್ದು ರಕ್ತನಾಳಗಳನ್ನು ಸಡಿಲುಗೊಳಿಸುವ ಕಾರ್ಯ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!