ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, 10 ಜವಾನರು ಹುತಾತ್ಮರಾಗಿದ್ದಾರೆ, ಒಬ್ಬರು ಚಾಲಕರೂ ಬಲಿಯಾಗಿದ್ದಾರೆ.
ಐಇಡಿ ಸ್ಫೋಟ ನಡೆಸಿ ನಕ್ಸಲರು 10 ಜನ ಮೀಸಲು ಪೊಲೀಸ್ ಪಡೆಯನ್ನು ಹತ್ಯೆ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಛತ್ತೀಸ್‌ಗಢದ ದಾಂತೆವಾಡಾ ಜಿಲ್ಲೆಯ ಅರಣ್‌ಪುರ ಬಳಿ ಗುರುವಾರ ಈ ಘಟನೆ ನಡೆದಿದೆ.
ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಿ ವಾಪಸ್ ಹೋಗುತ್ತಿದ್ದಾಗ ಈ ಬರ್ಬರ ಕೃತ್ಯ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 10 ಜನ ಜವಾನರು ಹಾಗೂ ಚಾಲಕ ಸೇರಿ 11 ಜನ ವಾಹನದಲ್ಲಿ ಹೋಗುತ್ತಿದ್ದಾಗ ಸಂಪೂರ್ಣ ವಾಹನವನ್ನೇ ಸ್ಪೋಟಿಸಿದ್ದಾರೆ. ಗುಪ್ತಚರ ಮಾಹಿತಿ ಆಧಾರದ ಮೇಲೆ ಇವರು ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದರು.
ಛತ್ತೀಸ್‌ಗಢ ವಿಶೇಷ ಪೊಲೀಸ್ ಘಟಕದ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ)ಗೆ ಸೇರಿದ ಜವಾನರು ಇವರು ಎಂದು ತಿಳಿದುಬಂದಿದೆ.