March 30, 2026
Monday, March 30, 2026
spot_img

ವಿಮಾನ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಏ.20 ರಿಂದ 60% ಉಚಿತ ಸೀಟು ಆಯ್ಕೆ ಆದೇಶ ಜಾರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಮಾನಗಳಲ್ಲಿ ಸೀಟು ಆಯ್ಕೆಗಾಗಿ ವಿಚಾರವಾಗಿ ನಾಗರಿಕ ವಿಮಾನಯನ ಸಚಿವಾಲಯ ಮಹತ್ವದ ಮಾಹಿತಿ ನೀಡಿದ್ದು, ಭಾರತದೊಳಗೆ ಪ್ರಯಾಣಿಸುವವರು ಮುಂದಿನ ಏ.20ರಿಂದ 60% ಸೀಟುಗಳನ್ನು ಉಚಿತವಾಗಿ ಆಯ್ಕೆ ಮಾಡುವ ಆದೇಶ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಶೇ.20ರಷ್ಟು ಆಸನಗಳು ಮಾತ್ರ ಉಚಿತವಾಗಿ ಲಭ್ಯವಾಗುತ್ತಿದ್ದರೆ, ಉಳಿದ ಆಸನಗಳಿಗೆ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿತ್ತು. ಆದರೆ ಇದೀಗ ಶೇ.60ರಷ್ಟು ಆಸನಗಳನ್ನು ಉಚಿತವಾಗಿ ಮಾಡಲು ಅವಕಾಶ ನೀಡಲಾಗಿದ್ದು, ಏ.20ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದೆ.

ಈ ಕುರಿತು ವಿಮಾನಯಾನ ಸಂಸ್ಥೆಗಳು ಸೀಟು ಹಂಚಿಕೆ ನೀತಿಯನ್ನು ಹಾಗೂ ಉಚಿತ ಸೀಟುಗಳ ಲಭ್ಯತೆಯ ಬಗ್ಗೆ ತಮ್ಮ ಬುಕ್ಕಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕೆಂದು ಡಿಜಿಸಿಎ ತಿಳಿಸಿದೆ.

ಈ ನಿಮಯದಿಂದಾಗಿ ಒಂದೇ ಪ್ರಯಾಣ ವಿವರ ಸಂಖ್ಯೆಯ ಅಡಿಯಲ್ಲಿ ಟಿಕೆಟ್ ಕಾಯ್ದಿರಿಸಿರುವವರನ್ನು ಒಂದೇ ಸ್ಥಳದಲ್ಲಿ, ಸಾಧ್ಯವಾದರೆ ಪಕ್ಕಪಕ್ಕದಲ್ಲಿ ಕುಳ್ಳಿರಿಸುವುದು ಕಡ್ಡಾಯವಾಗಿದ್ದು, ಇದರಿಂದ ಒಟ್ಟಿಗೆ ಪ್ರಯಾಣಿಸುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಜೊತೆಗೆ ಕ್ರೀಡಾ ಉಪಕರಣಗಳು ಮತ್ತು ಸಂಗೀತ ವಾದ್ಯಗಳನ್ನು ಸಾಗಿಸುವವರಿಗೂ ಅನುಕೂಲವಾಗುವಂತೆ ಸುರಕ್ಷಿತ ನಿಯಮ ಜಾರಿಗೆ ಸೂಚಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !