BREAKING NEWS | ವಿಮಾನಯಾನಿಗಳಿಗೆ ಗುಡ್ ನ್ಯೂಸ್: ಬೋರ್ಡಿಂಗ್ ಪಾಸ್ ಪಡೆಯಲು ಹೆಚ್ಚುವರಿ ಶುಲ್ಕ ಪಾವತಿಸಬೇಕಿಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏರ್ ಪೋರ್ಟ್ ಚೆಕ್-ಇನ್ ಕೌಂಟರ್‌ಗಳಲ್ಲಿ ಬೋರ್ಡಿಂಗ್ ಪಾಸ್‌ಗಳನ್ನು ವಿತರಿಸಲು ವಿಮಾನಯಾನ ಸಂಸ್ಥೆಗಳು ಹೆಚ್ಚುವರಿ ಮೊತ್ತ ವಿಧಿಸುವಂತಿಲ್ಲ, ಇದನ್ನು ವಿಮಾನ ನಿಯಮಗಳ ನಿಯಮ 135ರ ಅಡಿಯಲ್ಲಿ ಒದಗಿಸಲಾದ ಸುಂಕದ ಒಳಗೆ ಪರಿಗಣಿಸಲಾಗುವುದಿಲ್ಲ ಎಂದು ವಿಮಾನಯಾನ ಸಚಿವಾಲಯ ಇಂದು ಘೋಷಿಸಿದೆ.
ಪ್ರಸ್ತುತ, ವೆಬ್ ಚೆಕ್-ಇನ್ ಮಾಡದಿದ್ದರೆ ಬೋರ್ಡಿಂಗ್ ಪಾಸ್ ನೀಡಲು ವಿಮಾನಯಾನ ಸಂಸ್ಥೆಗಳು ಹೆಚ್ಚುವರಿಯಾಗಿ ₹200 ಶುಲ್ಕ ವಿಧಿಸುತ್ತವೆ.
‘ಪ್ರಯಾಣಿಕರಿಂದ ಬೋರ್ಡಿಂಗ್ ಪಾಸ್ ಗಳನ್ನು ವಿತರಿಸಲು ವಿಮಾನಯಾನ ಸಂಸ್ಥೆಗಳು ಹೆಚ್ಚುವರಿ ಮೊತ್ತ ವಿಧಿಸುತ್ತಿರುವುದು ಎಂಒಸಿಎ ಗಮನಕ್ಕೆ ಬಂದಿದೆ. ಈ ಹೆಚ್ಚುವರಿ ಮೊತ್ತವು ಮೇಲೆ ಹೇಳಿದ ಆದೇಶದಲ್ಲಿ ನೀಡಲಾದ ಸೂಚನೆಗಳಿಗೆ ಅನುಗುಣವಾಗಿಲ್ಲ ಅಥವಾ ವಿಮಾನ ನಿಯಮಗಳು, 1937 ರ ಅಸ್ತಿತ್ವದಲ್ಲಿರುವ ನಿಬಂಧನೆಗಳ ಪ್ರಕಾರವಲ್ಲ’ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!