ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ : ಅ. 9ಕ್ಕೆ ಗಂಧದ ಗುಡಿ ಟ್ರೈಲರ್ ಬಿಡುಗಡೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದಿ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ‘ಗಂಧದ ಗುಡಿ’ ಸಿನಿಮಾದ ಟ್ರೈಲರ್ ಅಕ್ಟೋಬರ್ 9 ರಂದು ಬಿಡುಗಡೆಯಾಗಲಿದೆ. ಈ ಬಗ್ಗೆ ಸ್ವತಃ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಮತ್ತು ಯುವ ರಾಜ್​​ಕುಮಾರ್​ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ.

ಒಂದು ಅದ್ಭುತ ಪಯಣಕ್ಕೆ ಕ್ಷಣಗಣನೆ ಪ್ರಾರಂಭವಾಗುತ್ತಿದೆ. ಗಂಧದ ಗುಡಿ ಟ್ರೈಲರ್ ಇನ್ನೆರೆಡು ದಿನಗಳಲ್ಲಿ ನಿಮ್ಮ ಮುಂದೆ. @PRKAudio ಯೂಟ್ಯೂಬ್ ಚಾನೆಲ್​ನಲ್ಲಿ ಎಂದು ಅಶ್ವಿನಿ ಪುನೀತ್​ ರಾಜ್​ಕುಮಾರ್ ಟ್ವೀಟ್ ಮಾಡಿದ್ದಾರೆ. ಬೆಳ್ಳಿ ತೆರೆಯ ಮೇಲೆ ಅಪ್ಪು ಚಿಕ್ಕಪ್ಪ ಅವರ ಅಂತಿಮ ಚಿತ್ರ ನೋಡಲು ಕಾತರದಿಂದ ಕಾಯುತ್ತಿದ್ದೇನೆ. ಒಂದು ಅದ್ಭುತ ಪಯಣಕ್ಕೆ ಕ್ಷಣಗಣನೆ ಪ್ರಾರಂಭವಾಗುತ್ತಿದೆ. ಗಂಧದಗುಡಿ ಟ್ರೈಲರ್ 9ರಂದು ಬೆಳಗ್ಗೆ 10:19 ಕ್ಕೆ @prk.audio ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್​ ಆಗಲಿದೆ ಎಂದು ನಟ ಯುವ ರಾಜ್​​ಕುಮಾರ್​ ಟ್ವೀಟ್ ಮಾಡಿದ್ದಾರೆ.

ನಾಡಹಬ್ಬ ರಾಜ್ಯೋತ್ಸವವನ್ನು ಅಪ್ಪುವಿನ ಗಂಧದ ಗುಡಿಯೊಂದಿಗೆ ಆಚರಿಸಲು ಮುಹೂರ್ತ ಫಿಕ್ಸ್ ಆಗಿದ್ದು, ಅಕ್ಟೋಬರ್ 28, 2022 ರಂದು ಗಂಧದ ಗುಡಿ ಸಿನಿಮಾ ಬಿಡುಗಡೆಯಾಗುತ್ತಿದೆ. ಅಪ್ಪು ಕೊನೆಯದಾಗಿ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಚಿತ್ರವಿದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!