ಕಲಾಭಿಮಾನಿಗಳಿಗೆ ಸಿಹಿ ಸುದ್ದಿ: ಈ ವಾರ ತೆರೆ ಮೇಲೆ ಬರಲಿದೆ ಬರೋಬ್ಬರಿ 20 ಸಿನಿಮಾಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ಭಾರತೀಯ ಚಿತ್ರರಂಗದಲ್ಲಿ ಅನೇಕ ಅದ್ಭುತ ಚಿತ್ರಗಳು ತೆರೆ ಮೇಲೆ ಬರುತ್ತಿದ್ದು, ಅನೇಕ ಸಿನಿಮಾಗಳು ಹಿಟ್ ಆಗುತ್ತಿದ್ದೆ. ಇದರ ನಡುವೆ ಕೆಲವು ಎಡವಿದರೂ ಸಿನಿಮಾ ವಾರ ವಾರ ರಿಲೀಸ್ ಆಗುತ್ತಿದೆ.

ಇದೀಗ ಈ ವಾರ ಕರ್ನಾಟಕದಲ್ಲಿಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿ ಬರೋಬ್ಬರಿ 20ಕ್ಕೂ ಹೆಚ್ಚು ಚಿತ್ರಗಳುಬಿಡುಗಡೆ ಆಗುತ್ತಿವೆ. ಕನ್ನಡದಲ್ಲೇ ಆರು ಚಿತ್ರಗಳು ಈ ಶುಕ್ರವಾರ ತೆರೆ ಕಾಣುತ್ತಿವೆ.

ಡಾಲಿ ಧನಂಜಯ್ ನಟನೆಯ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’, ಲೂಸ್ ಮಾದ ಯೋಗೀಶ್ ನಟನೆಯ ‘ನಾನು ಮತ್ತು ಸರೋಜ’, ಯೋಗರಾಜ್ ಭಟ್ ಅವರ ಬ್ಯಾನರ್ ನಿಂದ ತಯಾರಾದ ‘ಪದವಿ ಪೂರ್ವ’, ಹೊಸ ತಂಡದ ‘ಮೇಡ್ ಇನ್ ಇಂಡಿಯಾ’, ‘ಜೋರ್ಡನ್’, ‘ದ್ವಿಪಾತ್ರ’ ಚಿತ್ರಗಳು ಈ ವಾರ ತೆರೆಗೆ ಬರಲು ಸಿದ್ಧವಾಗಿವೆ.

ಇನ್ನು ಸ್ಟಾರ್ ನಟ ನಟಿಯರ ಚಿತ್ರಗಳಾದ ತಮಿಳಿನ ಖ್ಯಾತ ನಟಿ ತ್ರಿಶಾ ನಟನೆಯ ‘ರಾಂಗಿ’, ಐಶ್ವರ್ಯ ರಾಜೇಶ್ ನಟನೆಯ ‘ದ ಗ್ರೇಟ್ ಇಂಡಿಯನ್ ಕಿಚನ್, ಬಾಲಿವುಡ್ ನ ವೇದ್, ಟಾಲಿವುಡ್ ನ ಆದಿ ಸಾಯಿಕುಮಾರ್ ನಟನೆಯ ‘ಟಾಪ್ ಗೇರ್’, ಧನಂಜಯ್ ನಟನೆಯ ತೆಲುಗು ಅವತರಣಿಕೆ ‘ಒನ್ಸ್ ಅಪಾನ್ ಎ ಟೈಮ್ ಇನ್ ದೇವರಕೊಂಡ’ ಹೀಗೆ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳು ಈ ವಾರ ಕರ್ನಾಟಕದಲ್ಲಿ ಬಿಡುಗಡೆ (Release) ಆಗುತ್ತಿವೆ.

ಪ್ರಸುತ್ತ ರಿಲೀಸ್ ಆಗಿರುವ ಶಿವರಾಜ್ ಕುಮಾರ್ ನಟನೆಯ ವೇದ ಚಿತ್ರ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡುತ್ತಿವೆ. ಕಳೆದ ಕೆಲ ವಾರಗಳಿಂದ ರಿಲೀಸ್ ಆಗಿರುವ ಹಲವು ಚಿತ್ರಗಳು ಥಿಯೇಟರ್ ನಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!