ಅಮ್ಮನ ಕೊನೆಯ ಆಸೆ ಈಡೇರಿಸಿದ ಮಗಳು: ICUನಲ್ಲಿ ನೆರವೇರಿತು ಮದುವೆ!

ಹೊಸದಿಗಂತ ಡಿಜಿಟಲ್ ಡೆಸ್ಕ್‌

ಬಿಹಾರದಲ್ಲಿ ಒಂದು ಮನ ಸೆಳೆಯುವ ಘಟನೆ ನಡೆದಿದೆ. ತನ್ನ ತಾಯಿಯ ಕೊನೆಯ ಆಸೆ ಪೂರೈಸಲು ಮಗಳೊಬ್ಬಳು ತನ್ನ ಮದುವೆಯನ್ನು ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ (ICU) ಆಗಿದ್ದಾರೆ .

ಬಿಹಾರದ ಗಯಾ ನಿವಾಸಿ ಪೂನಂ ಮಗಧ್ ಎಂಬಾಕೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಗಯಾದ ಮ್ಯಾಜಿಸ್ಟ್ರೇಟ್ ಕಾಲೋನಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಾಗಿರಬೇಕು ಎಂದು ವೈದ್ಯರು ಕುಟುಂಬ ಸದಸ್ಯರಿಗೆ ಸೂಚಿಸಿದ್ದರು.

ಹೀಗಾಗಿ ಪೂನಂಗೆ ತನ್ನ ಮಗಳ ಮದುವೆಯನ್ನು ನೋಡಬೇಕು ಎಂಬ ಆಸೆಯಿತ್ತು. ಈ ಹಿನ್ನೆಲೆಯಲ್ಲಿ ಆಕೆ ತನ್ನ ಮಗಳು ಚಾಂದಿನಿ(26) ಬಳಿ ಹೇಳಿಕೊಂಡಿದ್ದಾಳೆ. ತನ್ನ ತಾಯಿಯ ಕೊನೆಯ ಆಸೆಯನ್ನು ಅರಿತ ಚಾಂದಿನಿ ಅದನ್ನು ನೆರವೆರಿಸಲು ಸಿದ್ಧವಾಗಿದ್ದಾಳೆ. ಈ ಮೊದಲೇ ಸೇಲಂಪುರ ಗ್ರಾಮದ ನಿವಾಸಿ ಸುಮಿತ್ ಗೌರವ್ (28) ನೊಂದಿಗೆ ವಿವಾಹವನ್ನು ನಿಗದಿಪಡಿಸಲಾಗಿತ್ತು. ಅಷ್ಟೇ ಅಲ್ಲದೇ ಇಬ್ಬರ ನಿಶ್ಚಿತಾರ್ಥ ಸಮಾರಂಭಕ್ಕೆ ಡಿ. 26 ರಂದು ದಿನಾಂಕ ನಿಗದಿಯಾಗಿತ್ತು. ಆದರೆ ಪೂನಂ ತನ್ನ ಕೊನೆಯ ಆಸೆಯನ್ನು ಹೇಳಿದಾಗ ಚಾಂದಿನಿ ಆ ವಿಷಯವನ್ನು ಸುಮಿತ್ ಕುಟುಂಬ ಸದಸ್ಯರಿಗೆ ತಿಳಿಸಿದಳು. ಇದಾದ ನಂತರ ಎರಡು ಕುಟುಂಬಗಳ ಪರಸ್ಪರ ಒಪ್ಪಿಗೆ ಮೇರೆಗೆ ಪೂನಂ ಅವರ ಕೊನೆಯ ಆಸೆಯನ್ನು ಈಡೇರಿಸಲು ಆಸ್ಪತ್ರೆಯಲ್ಲಿಯೇ ಮದುವೆಯನ್ನು ಏರ್ಪಡಿಸಲು ನಿರ್ಧರಿಸಿದರು.

ವಧು-ವರರು ಪರಸ್ಪರ ಹಾರ ಹಾಕಿದರು. ಈ ವೇಳೆ ಎರಡೂ ಕಡೆಯಿಂದ ಎರಡರಿಂದ ನಾಲ್ಕು ಮಂದಿ ಹಾಜರಿದ್ದರು. ಈ ವೇಳೆ ವಧು-ವರರು ತಾಯಿ ಪೂನಂ ಕುಮಾರಿ ವರ್ಮಾ ಅವರಿಂದ ಆಶೀರ್ವಾದ ಪಡೆದರು.

ಇತ್ತ ಮದುವೆಯಾದ ಕೆಲವೇ ಗಂಟೆಗಳಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಕೊನೆಯುಸಿರೆಳೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!