ಅಯ್ಯಪ್ಪ ಭಕ್ತರಿಗೆ ಗುಡ್ ನ್ಯೂಸ್: ರಸ್ತೆಗಿಳಿಯಲಿದೆ ಕೇರಳ ಎಸ್ಸಾರ್ಟಿಸಿಯ 800 ಬಸ್!

ಹೊಸದಿಗಂರ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳವಾದ ಶಬರಿಮಲೆಯಲ್ಲಿ ನಡೆಯುವ ಮಕರವಿಳಕ್ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಅಯ್ಯಪ್ಪ ಭಕ್ತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ 800 ಬಸ್‌ಗಳನ್ನು ಓಡಿಸಲು  ಕೇರಳ ಎಸ್ಸಾರ್ಟಿಸಿ ನಿರ್ಧರಿಸಿದೆ.

ಈ ಬಗ್ಗೆ ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಪಂಬಾ ಶ್ರೀರಾಮ ಸಾಕೇತಂ ಸಭಾಂಗಣದಲ್ಲಿ ನಡೆದ ಸಾರಿಗೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಭಕ್ತರಿಗೆ ಸೇವೆ ನೀಡುವ ಜೊತೆಗೆ ಕೆಎಸ್‌ಆರ್‍ಟಿಸಿ ಚಾಲಕರು ಮತ್ತು ದೂರದ ಪ್ರಯಾಣದ ಬಸ್ ಚಾಲಕರುಗಳಿಗೆ ವಿಶ್ರಾಂತಿ ಸೌಲಭ್ಯ ಕೂಡಾ ಕಲ್ಪಿಸಲಾಗುವುದು ಎಂದಿದ್ದಾರೆ.

ರಸ್ತೆಗಳಲ್ಲಿನ ಗುಂಡಿಗಳನ್ನು ದೇವಸ್ವಂ ಮಂಡಳಿ ತುರ್ತಾಗಿ ದುರಸ್ಥಿಗೊಳಿಸಬೇಕು. ಎರುಮಲೆ, ಪತ್ತನಂತಿಟ್ಟಗಳಲ್ಲಿ ಕೆಎಸ್‌ಆರ್‍ಟಿಸಿ ಬಸ್‌ಗಳನ್ನು ದೀರ್ಘಹೊತ್ತು ತಡೆಹಿಡಿಯಬಾರದು. ವಾಹನ ದಟ್ಟಣೆ ಕಂಡುಬಂದಲ್ಲಿ, ಪೊಲೀಸರು ಮೋಟಾರು ವಾಹನ ಇಲಾಖೆಯ ನೆರವಿನಿಂದ ವಾಹನ ಹೊರಡಲು ಅನುಕೂಲ ಮಾಡಿಕೊಡಬೇಕು ಎಂದು ಸ್ಥಳಿಯಾಡಳಿತಕ್ಕೆ ಅವರು ಸೂಚಿಸಿದರು.

ಪಂಬಾದಿಂದ ಹೊರಡುವ ದೂರದೂರಿನ ಬಸ್‌ಗಳಲ್ಲಿ ಜನ ತುಂಬಿದ್ದರೆ ಆ ಬಸ್ ನಿಲ್ದಾಣ ಪ್ರವೇಶಿಸಬೇಕಿಲ್ಲ. ಆದರೆ ಬಸ್ ತುಂಬದಿದ್ದರೆ ಬಸ್ ನಿಲ್ದಾಣದಲ್ಲಿಯೇ ನಿಲುಗಡೆಗೊಳಿಸಬೇಕು. ಪ್ರಯಾಣಿಕರಿಗೆ ಅನುಕೂಲವಾಗಲು ವಿವಿಧ ಭಾಷೆಗಳಲ್ಲಿ ಬೋರ್ಡ್‌ಗಳನ್ನು ಹಾಕಲಾಗುವುದು. ಜೊತೆಗೆ ಉದ್ಘೋಷವೂ ಇರಲಿದೆ ಎಂದು ಸಚಿವರು ಸಭೆಯಲ್ಲಿ ಮಾಹಿತಿ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!