ನಿಮ್ಮ ಕೋಪ ನ್ಯಾಯಯುತವಾದ್ದು: ಭಾರತಕ್ಕೆ ಕ್ಷಮೆ ಕೋರಿದ ಮಾಲ್ಡೀವ್ಸ್ ಸಂಸದೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ಬಾಯ್ಕಾಟ್ ಮಾಲ್ಡೀವ್ಸ್ ವೈರಲ್ ಆಗುತ್ತಿದ್ದಂತೆಯೇ ಮಾಲ್ಡೀವ್ಸ್ ಸಂಸದೆ ಇವಾ ಅಬ್ದುಲ್ಲಾ ಭಾರತೀಯರಲ್ಲಿ ಕ್ಷಮೆ ಕೋರಿದ್ದಾರೆ.

ಮೂವರು ಸಚಿವರು ಭಾರತವನ್ನು ಲೇವಡಿ ಮಾಡಿದ್ದರು. ಮಾಲ್ಡೀವ್ಸ್‌ನಷ್ಟು ಮೂಲಸೌಕರ್ಯಗಳು ಲಕ್ಷದ್ವೀಪದಲ್ಲಿ ಇಲ್ಲ. ಲಕ್ಷದ್ವೀಪವನ್ನು ಮಾಲ್ಡೀವ್ಸ್‌ನಂತೆ ಮಾಡುತ್ತೀರಿ ಎಂದು ಕೊಂಡಿದ್ದರೆ ಅದು ನಿಮ್ಮ ಭ್ರಮೆ ಎಂದು ಹೇಳಿದ್ದರು. ಈ ರೀತಿ ಮಾತುಗಳಿಂದ ನಿಮಗೆ ಕೋಪ ಬಂದಿರುತ್ತದೆ, ನಿಮ್ಮ ಕೋಪ ನ್ಯಾಯಯುತವಾದ್ದು ಎಂದು ಕ್ಷಮೆಯಾಚಿಸಿದ್ದಾರೆ.

ಮಾಲ್ಡೀವ್ಸ್ ಸಚಿವರ ಹೇಳಿಕೆಗೂ ಸರ್ಕಾರಕ್ಕೂ ಸಂಬಂಧ ಇಲ್ಲ, ಸಚಿವರುಗಳನ್ನು ಅಮಾನತು ಮಾಡಲಾಗಿದೆ. ಯಾರೂ ಈ ರೀತಿ ಹೇಳಿಕೆಯನ್ನು ತಮ್ಮ ದೇಶದ ಬಗ್ಗೆ ಸಹಿಸೋದಿಲ್ಲ. ನಾನೂ ಭಾರತೀಯರಲ್ಲಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!