ಭಾರತದ ನಾಗರಿಕರಿಗೆ ಗುಡ್ ನ್ಯೂಸ್: ಇರಾನ್‌ಗೆ ಹೋಗಲು ಇನ್ಮುಂದೆ ಬೇಡ ವೀಸಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಫೆಬ್ರವರಿ 4 ರಿಂದ ಜಾರಿಗೆ ಬರುವಂತೆ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಸರ್ಕಾರವು ಭಾರತದ ನಾಗರಿಕರಿಗೆ ವೀಸಾ ನಿಯಮಗಳ ಕುರಿತು ಮಹತ್ವದ ಪ್ರಕಟಣೆಯನ್ನು ಹೊರಡಿಸಿದೆ.

ಮಾನ್ಯ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ಭಾರತೀಯ ಪ್ರಜೆಗಳಿಗೆ ಪ್ರವಾಸೋದ್ಯಮ ಉದ್ದೇಶಗಳಿಗಾಗಿ ಇರಾನ್‌ಗೆ ಪ್ರವೇಶಿಸಲು ಇನ್ನು ಮುಂದೆ ವೀಸಾ ಅಗತ್ಯವಿಲ್ಲ.

ಆದ್ರೆ ರಾನಿನ ಅಧಿಕಾರಿಗಳು ವಿವರಿಸಿರುವ ನಿರ್ದಿಷ್ಟ ಷರತ್ತುಗಳು ಮತ್ತು ಮಿತಿಗಳು ಈ ಆದೇಶಕ್ಕೆಇದ್ದು, ಮೊದಲನೆಯದಾಗಿ, ಸಾಮಾನ್ಯ ಭಾರತೀಯ ಪಾಸ್‌ಪೋರ್ಟ್‌ಗಳನ್ನು ಹೊಂದಿರುವ ವ್ಯಕ್ತಿಗಳು ಪ್ರತಿ ಆರು ತಿಂಗಳಿಗೊಮ್ಮೆ ವೀಸಾ ಇಲ್ಲದೆ ಇರಾನ್‌ಗೆ ಪ್ರವೇಶಿಸಲು ಅನುಮತಿಸಲಗುತ್ತದೆ. ಹಾಗಿದ್ದರೂ ಅವರ ವಾಸ್ತವ್ಯವು ಪ್ರತಿ ಭೇಟಿಯಲ್ಲಿ ಗರಿಷ್ಠ 15 ದಿನಗಳವರೆಗೆ ಸೀಮಿತವಾಗಿರುತ್ತದೆ. ಈ ಅವಧಿಯನ್ನು ಯಾವುದೇ ಸಂದರ್ಭಗಳಲ್ಲಿ ವಿಸ್ತರಿಸಲಾಗುವುದಿಲ್ಲ ಎಂದು ತಿಳಿಸಿದೆ.

ಅದೇ ರೀತಿ ವೀಸಾ ರದ್ದತಿಯು ಇರಾನ್‌ಗೆ ಪ್ರವೇಶಿಸುವ ಪ್ರವಾಸಿಗರಿಗೆ ಮಾತ್ರ ಅನ್ವಯಿಸುತ್ತದೆ. ಆದ್ದರಿಂದ, ಹೆಚ್ಚು ವಿಸ್ತೃತ ಅವಧಿಯವರೆಗೆ ಉಳಿಯಲು ಉದ್ದೇಶಿಸಿರುವ ವ್ಯಕ್ತಿಗಳು, ಆರು ತಿಂಗಳ ಅವಧಿಯೊಳಗೆ ಸಾಕಷ್ಟು ಬಾರಿ ಇರಾನ್‌ಗೆ ಭೇಟಿ ನೀಡಲು ಬಯಸುವವರು ಅಥವಾ ಪ್ರವಾಸೋದ್ಯಮವನ್ನು ಹೊರತುಪಡಿಸಿ ಬೇರೆ ಬೇರೆ ಉದ್ದೇಶಗಳಿಗಾಗಿ ವಿವಿಧ ರೀತಿಯ ವೀಸಾಗಳ ಅಗತ್ಯವಿರುವವರು ಭಾರತದಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಆಯಾ ಕಚೇರಿಗಳ ಮೂಲಕ ಅಗತ್ಯ ದಾಖಲೆಗಳನ್ನು ಪಡೆಯಬೇಕು ಎಂದು ತಿಳಿಸಲಾಗಿದೆ.

ಈ ವೀಸಾ ವಿನಾಯಿತಿಯು ವಾಯು ಗಡಿಗಳ ಮೂಲಕ ಇರಾನ್‌ಗೆ ಪ್ರವೇಶಿಸುವ ಭಾರತೀಯ ಪ್ರಜೆಗಳಿಗೆ ಮಾತ್ರ ಅನ್ವಯಿಸುತ್ತದೆ. ಭೂ ಗಡಿಗಳಂತಹ ಇತರ ಪ್ರವೇಶ ವಿಧಾನಗಳ ಮೂಲಕ ಆಗಮಿಸುವ ಪ್ರಯಾಣಿಕರು ವಿಭಿನ್ನ ನಿಯಮಗಳು ಮತ್ತು ವೀಸಾ ಅವಶ್ಯಕತೆಗಳಿಗೆ ಒಳಪಡಲಿದ್ದಾರೆ ಎಂದು ತಿಳಿಸಿದೆ.

ಇರಾನ್ ಸರ್ಕಾರದ ಈ ನಿರ್ಧಾರವು ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತು ಇರಾನ್ ಮತ್ತು ಭಾರತದ ನಡುವಿನ ಪ್ರಯಾಣವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!