ರೈತರಿಗೆ ಕೇಂದ್ರ ಸರಕಾರದಿಂದ ಗುಡ್ ನ್ಯೂಸ್: ರಸಗೊಬ್ಬರ ಮೇಲೆ ಸಿಗಲಿದೆ ಸಬ್ಸಿಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೇಂದ್ರ ಸರ್ಕಾರದಿಂದ ರೈತರಿಗಾಗಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು,ರೈತರಿಗೆ ರಸಗೊಬ್ಬರದ ಮೇಲೆ ನೀಡುವ ಸಹಾಯಧನಕ್ಕೆ ಅನುಮೋದನೆ ನೀಡಲಾಗಿದೆ.
ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಮುಖ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.ಕೇಂದ್ರ ಸರ್ಕಾರ 1.08 ಲಕ್ಷ ಕೋಟಿ ರೂ ಮೊತ್ತದಷ್ಟು ರಸಗೊಬ್ಬರ ಸಬ್ಸಿಡಿ ಹಣ ಬಿಡುಗಡೆ ಮಾಡಲಿದೆ.

ಯೂರಿಯಾ ಮತ್ತು ಡಿಎಪಿ, ಎಂಒಪಿ ಮತ್ತಿತರ ರಸಗೊಬ್ಬರಗಳಿಗೆ (fertilizers) ಈ ಸಬ್ಸಿಡಿ ಸಿಗಲಿದೆ. ಮುಂಗಾರು ಸೀಸನ್​ಗೆ 1.08 ಲಕ್ಷ ಕೋಟಿ ರೂ ರಸಗೊಬ್ಬರ ಸಬ್ಸಿಡಿಗೆ ಸಂಪುಟ ಅನುಮೋದನೆ ಕೊಟ್ಟಿರುವ ಸಂಗತಿಯನ್ನು ಕೇಂದ್ರ ರಸಗೊಬ್ಬರ ಸಚಿವ ಮನ್​ಸುಖ್ ಮಾಂಡವೀಯ ತಿಳಿಸಿದ್ದಾರೆ. ಕೇಂದ್ರದ ಈ ಸಬ್ಸಿಡಿಯು 12 ಕೋಟಿ ರೈತರಿಗೆ ಉಪಯೋಗವಾಗುವ ನಿರೀಕ್ಷೆ ಇದೆ.

ಪ್ರಧಾನ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಖಾರಿಫ್ ಹಂಗಾಮಿನ ಮೊದಲು ರೈತರಿಗೆ ರಸಗೊಬ್ಬರಗಳ ಮೇಲೆ ನೀಡಲಾಗುವ ಸಬ್ಸಿಡಿಯನ್ನ ಕೇಂದ್ರ ಸರ್ಕಾರ ಅನುಮೋದಿಸಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಮನ್ಸುಖ್ ಮಾಂಡವಿಯಾ ಘೋಷಿಸಿದರು.

ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನ ತರ್ಕಬದ್ಧಗೊಳಿಸುವುದು, ಖಾರಿಫ್ ಋತುವಿನಲ್ಲಿ ನ್ಯಾಯಯುತ ಮತ್ತು ಸಮಂಜಸವಾದ ಬೆಲೆಗಳು. 2023-24ರ ಖಾರಿಫ್ ಋತುವಿನಲ್ಲಿ ರಸಗೊಬ್ಬರಗಳ ಚಿಲ್ಲರೆ ಬೆಲೆಗಳು ಏರಿಕೆಯಾಗದಂತೆ ನೋಡಿಕೊಳ್ಳಲು ಕೇಂದ್ರ ಸಚಿವ ಸಂಪುಟವು 1.08 ಲಕ್ಷ ಕೋಟಿ ರೂಪಾಯಿಗಳ ರಸಗೊಬ್ಬರ ಸಬ್ಸಿಡಿಗೆ ಅನುಮೋದನೆ ನೀಡಿದೆ.

ಖಾರಿಫ್ ಹಂಗಾಮಿನಲ್ಲಿ ಯೂರಿಯಾಕ್ಕೆ ರೂ.70,000 ಕೋಟಿ ಮತ್ತು ಡಿಎಪಿ ಮತ್ತು ಇತರ ರಸಗೊಬ್ಬರಗಳಿಗೆ 38,000 ಕೋಟಿ ಸಬ್ಸಿಡಿ ನೀಡಲು ಸಂಪುಟ ಅನುಮೋದನೆ ನೀಡಿದೆ ಎಂದರು.ಈ ಹೊಸ ದರ ಏಪ್ರಿಲ್​ನಿಂದಲೇ ಅನ್ವಯ ಆಗಲಿದ್ದು, 2023 ಸೆಪ್ಟಂಬರ್​ವರೆಗೂ ಇರಲಿದೆ.

ಪ್ರಸ್ತುತ ಯೂರಿಯಾ ಪ್ರತಿ ಚೀಲಕ್ಕೆ 276 ಇದ್ದರೆ ಡಿಎಪಿ ಪ್ರತಿ ಚೀಲಕ್ಕೆ 1,350 ಇದೆ. ಈ ಸಬ್ಸಿಡಿಯಿಂದ ಸುಮಾರು 12 ಕೋಟಿ ರೈತರು ಪ್ರಯೋಜನ ಪಡೆಯುವ ಸಾಧ್ಯತೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!