June 11, 2026
Thursday, June 11, 2026
spot_img

ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್: 2027ರ ಐಸಿಸಿ ವಿಶ್ವಕಪ್ ವೇಳಾಪಟ್ಟಿ ವಿವರ ಬಹಿರಂಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂದಿನ ವರ್ಷ ಅಂದರೆ 2027 ರಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಕ್ರಿಕೆಟ್ ಜಗತ್ತು ಸಜ್ಜಾಗುತ್ತಿದೆ. ಕಳೆದ ಬಾರಿಯ ರನ್ನರ್ ಅಪ್ ಟೀಂ ಇಂಡಿಯಾ ಈಗಾಗಲೇ ಪ್ರಮುಖ ದ್ವಿಪಕ್ಷೀಯ ಸರಣಿಗಳನ್ನು ಆಡುವ ಮೂಲಕ ಭರ್ಜರಿ ತಯಾರಿ ಆರಂಭಿಸಿದೆ. ಈ ಬೆನ್ನಲ್ಲೇ, ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಮೆಗಾ ಟೂರ್ನಿಯ ದಿನಾಂಕ ಮತ್ತು ಆತಿಥ್ಯದ ಪ್ರಮುಖ ವಿವರಗಳು ಈಗ ಬಹಿರಂಗಗೊಂಡಿವೆ.

ವಿಶ್ವಾಸಾರ್ಹ ವರದಿಗಳ ಪ್ರಕಾರ, 2027ರ ಅಕ್ಟೋಬರ್ 4 ರಿಂದ ನವೆಂಬರ್ 21 ರವರೆಗೆ ಈ ಪ್ರತಿಷ್ಠಿತ ವಿಶ್ವಕಪ್ ಟೂರ್ನಿ ನಡೆಯುವ ಸಾಧ್ಯತೆಯಿದೆ. ಈ ಬಾರಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ದೇಶಗಳು ಜಂಟಿಯಾಗಿ ಈ ಕ್ರಿಕೆಟ್ ಹಬ್ಬಕ್ಕೆ ಆತಿಥ್ಯ ವಹಿಸುತ್ತಿರುವುದು ವಿಶೇಷ.

ಯಾವ ದೇಶದಲ್ಲಿ ಎಷ್ಟು ಪಂದ್ಯಗಳು?
ಟೂರ್ನಿಯ ಒಟ್ಟು 54 ಪಂದ್ಯಗಳ ಪೈಕಿ ಸಿಂಹಪಾಲು ದಕ್ಷಿಣ ಆಫ್ರಿಕಾ ಪಾಲಾಗಿದೆ.

ದಕ್ಷಿಣ ಆಫ್ರಿಕಾ: 41 ಪಂದ್ಯಗಳು

ಜಿಂಬಾಬ್ವೆ: 8 ರಿಂದ 10 ಪಂದ್ಯಗಳು

ನಮೀಬಿಯಾ: 3 ಪಂದ್ಯಗಳು

ಪ್ರಮುಖ ಕ್ರೀಡಾಂಗಣಗಳು:
ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್, ಕೇಪ್ ಟೌನ್, ಸೆಂಚುರಿಯನ್, ಡರ್ಬನ್, ಬ್ಲೋಮ್‌ಫಾಂಟೈನ್, ಪೂರ್ವ ಲಂಡನ್, ಗ್ಕೆಬೆರ್ಹಾ ಮತ್ತು ಪಾರ್ಲ್ ಸೇರಿದಂತೆ ಒಟ್ಟು 8 ಪ್ರಮುಖ ಕ್ರೀಡಾಂಗಣಗಳಲ್ಲಿ ಪಂದ್ಯಗಳು ಜರುಗಲಿವೆ. ಆಫ್ರಿಕಾದ ವೇಗದ ಪಿಚ್‌ಗಳಲ್ಲಿ ಟ್ರೋಫಿ ಎತ್ತಿಹಿಡಿಯಲು ರೋಹಿತ್ ಪಡೆ ಹಾಗೂ ಯುವ ಬ್ರಿಗೇಡ್ ಈಗಿನಿಂದಲೇ ರಣತಂತ್ರ ರೂಪಿಸುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !