October 8, 2026
Thursday, October 8, 2026

ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಸತತ ಎರಡನೇ ದಿನವೂ ಚಿನ್ನ, ಬೆಳ್ಳಿ ದರ ಅಗ್ಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಂಗಾರ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದ್ದು, ಚಿನ್ನದ ಬೆಲೆ ಸತತವಾಗಿ ಕುಸಿತ ಕಾಣುತ್ತಿದೆ. ನಿನ್ನೆ ಮಾರುಕಟ್ಟೆಯಲ್ಲಿ 25 ರೂಪಾಯಿ ಇಳಿಕೆಯಾಗಿದ್ದ ದರ, ಇಂದು ಶುಕ್ರವಾರ ಮತ್ತಷ್ಟು ತಗ್ಗಿ 70 ರೂಪಾಯಿ ಕಮ್ಮಿಯಾಗಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ, ಜಾಗತಿಕ ಮಾರುಕಟ್ಟೆಯಲ್ಲೂ ಕೂಡ ಬಹುತೇಕ ಕಡೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ.

ಇಂದಿನ ಚಿನ್ನ ಮತ್ತು ಬೆಳ್ಳಿ ದರ ವಿವರ

ದೇಶದಲ್ಲಿ ಪ್ರಸ್ತುತ ಆಭರಣ ಪ್ರಿಯರ ನೆಚ್ಚಿನ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 1,30,650 ರೂಪಾಯಿ ತಲುಪಿದೆ. ಇನ್ನು ಅತ್ಯಂತ ಶುದ್ಧವಾದ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,42,530 ರೂಪಾಯಿ ಆಗಿದೆ. ಇತ್ತ ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದ್ದು, ಶುಕ್ರವಾರ ಪ್ರತಿ ಗ್ರಾಂಗೆ 5 ರೂಪಾಯಿ ತಗ್ಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಸದ್ಯ 100 ಗ್ರಾಂ ಬೆಳ್ಳಿಯ ಬೆಲೆ 23,000 ರೂಪಾಯಿ ಇದೆ.

ನಮ್ಮ ಸಿಲಿಕಾನ್ ಸಿಟಿ ಮತ್ತು ನೆರೆ ರಾಜ್ಯಗಳ ದರ ಹೇಗಿದೆ?

ಬೆಂಗಳೂರಿನಲ್ಲೂ ಸಹ 10 ಗ್ರಾಂ ಚಿನ್ನದ ಬೆಲೆ 1,30,650 ರೂಪಾಯಿ ಹಾಗೂ 100 ಗ್ರಾಂ ಬೆಳ್ಳಿಯ ಬೆಲೆ 23,000 ರೂಪಾಯಿ ದಾಖಲಾಗಿದೆ. ಆದರೆ, ನೆರೆ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದ ಕೆಲವು ಭಾಗಗಳಲ್ಲಿ 100 ಗ್ರಾಂ ಬೆಳ್ಳಿ ದರ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದ್ದು, 23,500 ರೂಪಾಯಿ ಆಸುಪಾಸಿನಲ್ಲಿದೆ.

Must Read