ಪ್ರಯಾಣಿಕರಿಗೆ ಗುಡ್ ನ್ಯೂಸ್: ನಾಳೆಯಿಂದ ದೇಶೀಯ ವಿಮಾನ ದರ ಮಿತಿ ರದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಮಾನಯಾನ ಸಂಸ್ಥೆಗಳಿಗೆ ಪ್ರಯಾಣಿಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ನಾಳೆಯಿಂದ ಅಂದರೆ ಆಗಸ್ಟ್ 31 ರಿಂದ ದೇಶೀಯ ವಿಮಾನ ದರಗಳ ಮೇಲಿನ ಬೆಲೆ ಮಿತಿಗಳನ್ನು ಸರ್ಕಾರ ತೆಗೆದುಹಾಕಲಿದೆ.

ಸುಮಾರು 27 ತಿಂಗಳ ಅವಧಿಯ ನಂತರ ಆಗಸ್ಟ್ 31 ರಿಂದ ದೇಶೀಯ ವಿಮಾನ ದರಗಳ ಮೇಲಿನ ಮಿತಿಗಳನ್ನು ತೆಗೆದುಹಾಕಲಾಗುವುದು ಎಂದು ಕೇಂದ್ರ ವಿಮಾನಯಾನ ಸಚಿವಾಲಯ ಈ ತಿಂಗಳ ಆರಂಭದಲ್ಲಿ ತಿಳಿಸಿತ್ತು.

ನಿಗದಿತ ದೇಶೀಯ ಕಾರ್ಯಾಚರಣೆಗಳ ಪ್ರಸ್ತುತ ಸ್ಥಿತಿಯನ್ನು ಪರಿಶೀಲಿಸಿದ ನಂತರ ವಿಮಾನ ಪ್ರಯಾಣಕ್ಕಾಗಿ ಪ್ರಯಾಣಿಕರ ಬೇಡಿಕೆ ಅನುಸಾರ ಆಗಸ್ಟ್ 31, 2022 ರಿಂದ ಜಾರಿಗೆ ಬರುವಂತೆ ವಿಮಾನ ದರಗಳಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಸೂಚಿಸಲಾದ ದರ ಪಟ್ಟಿಗಳನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಆದೇಶದಲ್ಲಿ ತಿಳಿಸಿದೆ.

ಇನ್ನು ಮುಂದೆ ಯಾವುದೇ ದರದ ಮಿತಿಗಳಿಲ್ಲದಿರುವುದರಿಂದ, ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಸೂಕ್ತವಾದ ದರ ವಿಧಿಸಬಹುದು. ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸಲು ವಿಮಾನಯಾನ ಸಂಸ್ಥೆಗಳು ಫ್ಲೈಟ್ ಟಿಕೆಟ್ ದರಗಳಲ್ಲಿ ರಿಯಾಯಿತಿಗಳನ್ನು ನೀಡಬಹುದು. ಈ ಹಿಂದೆ, ಸರ್ಕಾರ ವಿಧಿಸಿದ ದೇಶೀಯ ವಿಮಾನ ದರದ ಮೇಲಿನ ಕಡಿಮೆ ಮತ್ತು ಮೇಲಿನ ಬೆಲೆಯ ಮಿತಿಗಳಿಂದಾಗಿ ವಿಮಾನಯಾನ ಸಂಸ್ಥೆಗಳು ರಿಯಾಯಿತಿಗಳನ್ನು ನೀಡಲು ಸಾಧ್ಯವಾಗಲಿಲ್ಲ.

ಏರ್ ಟರ್ಬೈನ್ ಇಂಧನದ (ATF) ದೈನಂದಿನ ಬೇಡಿಕೆ ಮತ್ತು ಬೆಲೆಗಳನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿದ ನಂತರ ವಿಮಾನ ದರದ ಮಿತಿಗಳನ್ನು ತೆಗೆದುಹಾಕುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಮುಂದಿನ ದಿನಗಳಲ್ಲಿ ದೇಶೀಯ ಟ್ರಾಫಿಕ್ ಬೆಳವಣಿಗೆಗೆ ಈ ವಲಯ ಸಿದ್ಧವಾಗಿದೆ ಎಂದು ನಮಗೆ ಖಚಿತವಾಗಿದೆ ಎಂದು ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಟ್ವೀಟ್ ಮಾಡಿದ್ದಾರೆ.
ಉದಾಹರಣೆಗೆ, ವಿಮಾನಯಾನ ಸಂಸ್ಥೆಗಳು ಪ್ರಸ್ತುತ 40 ನಿಮಿಷಗಳಿಗಿಂತ ಕಡಿಮೆ ಅವಧಿಯ ದೇಶೀಯ ವಿಮಾನಗಳಿಗೆ 2,900 ರೂ.(GST ಹೊರತುಪಡಿಸಿ) ಮತ್ತು 8,800 ರೂ.ಕ್ಕಿಂತ ಹೆಚ್ಚು(GST ಹೊರತುಪಡಿಸಿ) ಪ್ರಯಾಣಿಕರಿಗೆ ಶುಲ್ಕ ವಿಧಿಸುವಂತಿಲ್ಲ.

ಮಿತಿ ಏಕೆ ವಿಧಿಸಿತ್ತು?
ರಾಷ್ಟ್ರವ್ಯಾಪಿ ಕೋವಿಡ್-19 ಲಾಕ್‌ ಡೌನ್ ನಂತರ ವಿಮಾನ ಪ್ರಯಾಣ ಪುನರಾರಂಭಗೊಂಡಿದ್ದರಿಂದ ಸರ್ಕಾರ ಮೇ 2020 ರಲ್ಲಿ ದೇಶೀಯ ವಿಮಾನ ದರಗಳ ಮೇಲೆ ಕಡಿಮೆ ಮತ್ತು ಮೇಲಿನ ಮಿತಿಗಳನ್ನು ವಿಧಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!