March 30, 2026
Monday, March 30, 2026
spot_img

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಗುಡ್ ಫ್ರೈಡೇ–ಈಸ್ಟರ್ ಹಬ್ಬಕ್ಕೆ ಬೆಂಗಳೂರು to ಮಡಗಾಂವ್ ಸ್ಪೆಷಲ್ ಟ್ರೈನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಡ್ ಫ್ರೈಡೇ ಹಾಗೂ ಈಸ್ಟರ್ ಹಬ್ಬದ ರಜಾದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ನೈಋತ್ಯ ರೈಲ್ವೆ ವಿಶೇಷ ರೈಲುಗಳ ಸಂಚಾರವನ್ನು ಘೋಷಿಸಿದೆ.

ಯಶವಂತಪುರ, ಮಡಗಾಂವ್ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವೆ ಹೆಚ್ಚುವರಿ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದ್ದು, ಕರಾವಳಿ ಹಾಗೂ ಗೋವಾ ಭಾಗಗಳಿಗೆ ತೆರಳುವವರಿಗೆ ಇದು ದೊಡ್ಡ ನೆರವಾಗಲಿದೆ.

ರೈಲ್ವೆ ಪ್ರಕಟಣೆ ಪ್ರಕಾರ, 06271 ಯಶವಂತಪುರ–ಮಡಗಾಂವ್ ವಿಶೇಷ ಎಕ್ಸ್‌ಪ್ರೆಸ್ ಏಪ್ರಿಲ್ 2ರಂದು ರಾತ್ರಿ 11.55ಕ್ಕೆ ಯಶವಂತಪುರದಿಂದ ಹೊರಡಲಿದ್ದು, ಏಪ್ರಿಲ್ 3ರಂದು ಸಂಜೆ 5.30ಕ್ಕೆ ಮಡಗಾಂವ್ ತಲುಪಲಿದೆ.

ವಾಪಸ್ಸು 06272 ಮಡಗಾಂವ್–ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ ಏಪ್ರಿಲ್ 5ರಂದು ಬೆಳಿಗ್ಗೆ 11 ಗಂಟೆಗೆ ಮಡಗಾಂವ್‌ನಿಂದ ಹೊರಟು, ಏಪ್ರಿಲ್ 6ರಂದು ಬೆಳಗಿನ ಜಾವ 5.20ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.

ಇದನ್ನೂ ಓದಿ:

ಈ ವಿಶೇಷ ರೈಲುಗಳು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಉಡುಪಿ, ಕುಂದಾಪುರ, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ ಮತ್ತು ಕಾರವಾರ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ.

ಒಟ್ಟು 19 ಬೋಗಿಗಳಿರುವ ಈ ರೈಲುಗಳಲ್ಲಿ ಎಸಿ 2-ಟೈರ್, ಎಸಿ 3-ಟೈರ್, ಸ್ಲೀಪರ್ ಹಾಗೂ ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳ ವ್ಯವಸ್ಥೆ ಮಾಡಲಾಗಿದೆ.

ಹಬ್ಬದ ಸಂಭ್ರಮದಲ್ಲಿ ಪ್ರಯಾಣಿಸುವವರಿಗೆ ಈ ವಿಶೇಷ ರೈಲುಗಳು ಅನುಕೂಲವಾಗಲಿದ್ದು, ಟಿಕೆಟ್‌ಗಳಿಗೆ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !