April 25, 2026
Saturday, April 25, 2026
spot_img

‘ಪರ್ಸಿಮನ್ ಆಫ್ ಲವ್’ ನಿಂದ ಗಟ್ಟಿಯಾಯ್ತು ಭಾರತ-ರಷ್ಯಾ ಸಂಬಂಧ: ಇಂಟ್ರೆಸ್ಟಿಂಗ್ ಆಗಿದೆ ಹೊಸ ಸಿನಿಮಾ ಟ್ರೇಲರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಸಿನಿಮಾಗಳು ವಿದೇಶಿ ಲೊಕೇಶನ್‌ಗಳಲ್ಲಿ ಚಿತ್ರೀಕರಣ ಮಾಡುವುದು ಸಾಮಾನ್ಯ. ಆದರೆ ಈ ಬಾರಿ ಚಿತ್ರಪ್ರಿಯರ ಗಮನ ಸೆಳೆದಿರುವ ಒಂದು ವಿಷ್ಯ ಏನಪ್ಪಾ ಅಂದ್ರೆ ರಷ್ಯಾದ ಸಿನಿಮಾ ಒಂದು ಭಾರತದ ನಗರಗಳಲ್ಲಿ ಸಂಪೂರ್ಣವಾಗಿ ಚಿತ್ರೀಕರಿಸಿರುವುದು.

ಹೌದು! ಭಾರತ–ರಷ್ಯಾ ಜಂಟಿ ನಿರ್ಮಾಣದ ‘Persimmon of My Love’ ಸಿನಿಮಾ ಏಪ್ರಿಲ್ 1ರಂದು ತೆರೆಗೆ ಬರಲು ಸಜ್ಜಾಗಿದೆ.

ಈ ಚಿತ್ರವು ಭಾರತ ಮತ್ತು ರಷ್ಯಾ ಸೇರಿ ನಿರ್ಮಿಸಿರುವ ಪ್ರಮುಖ ಜಂಟಿ ಯೋಜನೆಗಳಲ್ಲಿ ಒಂದಾಗಿದ್ದು, ಬಾಲಿವುಡ್ ಶೈಲಿಯ ಸಂಗೀತ, ನೃತ್ಯ ಮತ್ತು ಭಾವನಾತ್ಮಕ ಕಥಾಹಂದರದೊಂದಿಗೆ ಮೂಡಿಬಂದಿದೆ. ನಿರ್ದೇಶಕ ಮಾರಿಯಸ್ ವೈಸ್‌ಬರ್ಗ್ ಈ ಸಿನಿಮಾವನ್ನು ಸಂಪೂರ್ಣವಾಗಿ ಭಾರತೀಯ ಸಿನೆಮಾ ಶೈಲಿಯಿಂದ ಪ್ರೇರಿತವಾಗಿ ರೂಪಿಸಿದ್ದಾರೆ.

ಇದನ್ನೂ ಓದಿ:

ಚಿತ್ರದ ಪ್ರಮುಖ ಭಾಗಗಳನ್ನು ಮುಂಬೈ, ಉದಯಪುರ ಮತ್ತು ಜೋಧಪುರ ನಗರಗಳ ಬೀದಿಗಳು, ಅರಮನೆಗಳು ಮತ್ತು ಐತಿಹಾಸಿಕ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಟ್ರೇಲರ್ ಬಿಡುಗಡೆಯಾದ ಬಳಿಕ ಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಥೆಯಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಮತ್ತು ಒಬ್ಬ ಅಪರಾಧಿಯ ನಡುವಿನ ಪೈಪೋಟಿ ಮುಖ್ಯವಾಗಿದ್ದು, ಈ ಸಂಘರ್ಷದ ಮಧ್ಯೆ ದೀರ್ಘಕಾಲದಿಂದ ಮುಚ್ಚಿಟ್ಟ ಕುಟುಂಬ ರಹಸ್ಯವೊಂದು ಹೊರಬೀಳುತ್ತದೆ. ಕಥೆಯ ತಿರುವುಗಳು ಬಾಲಿವುಡ್ ಸ್ಟೈಲ್ ಮಸಾಲಾ ಸಿನಿಮಾವನ್ನು ನೆನಪಿಸುವಂತಿವೆ.

ಚಿತ್ರ ಭಾರತದಲ್ಲೂ ಕೆಲವು ಪ್ರಮುಖ ನಗರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಜೊತೆಗೆ ಹಿಂದಿ ಡಬ್ಬಿಂಗ್ ಕುರಿತ ಚರ್ಚೆಯೂ ನಡೆಯುತ್ತಿದೆ ಎಂಬ ಮಾಹಿತಿ ಸಿನಿ ವಲಯದಲ್ಲಿ ಕೇಳಿಬರುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !