August 4, 2026
Tuesday, August 4, 2026
spot_img

ಸಮಂತಾ ಕಡೆಯಿಂದ ಸಿಕ್ಕಿದೆ ಗುಡ್‌ನ್ಯೂಸ್‌, ಕುಟುಂಬ ದೊಡ್ಡದಾಗ್ತಿರೋದು ನಿಜವಂತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಸಮಂತಾ ಅಭಿನಯದ ಮಾ ಇಂಟಿ ಬಂಗಾರಂ ಸಿನಿಮಾ ಸಕ್ಸಸ್‌ ಜೊತೆಗೆ ನಟಿ ಫ್ಯಾನ್ಸ್‌ಗೆ ತಮ್ಮ ಲೈಫ್‌ನ ಮತ್ತೊಂದು ಸಿಹಿಸುದ್ದಿಯನ್ನು ನೀಡಿದ್ದಾರೆ. ಸಮಂತಾ ಪ್ರೆಗ್ನೆಂಟ್‌ ಎನ್ನುವ ಸುದ್ದಿಗಳು ಹರಿದಾಡಿದ್ದು, ಎಲ್ಲರೂ ರಿಯಲ್‌ ಎಂದು ತಿಳಿದುಬಂದಿದೆ.

ಮಾ ಇಂಟಿ ಬಂಗಾರಂ ಸಿನಿಮಾ ನಿರ್ದೇಶಕಿ ನಂದಿನಿ ರೆಡ್ಡಿ ಈ ಬಗ್ಗೆ ಮಾತನಾಡಿದ್ದು, ಸಮಂತಾ ಲಕ್ಕಿ ಚಾರ್ಮ್‌. ನಮ್ಮ ಸಿನಿಮಾ ಮಾ ಇಂಟಿ ಬಂಗಾರಂ ಯಶಸ್ಸು ಕಂಡಿದೆ, ಇದೇ ಸಮಯಕ್ಕೆ ಸಮಂತಾ ಕೂಡ ತಾಯಿಯಾಗ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಈ ಸಿನಿಮಾ ಸಕ್ಸಸ್‌ ಮೀಟ್‌ ವೇಳೆ ಸಮಂತಾ ವೈಟ್‌ ಟೀ ಶರ್ಟ್‌ ಹಾಗೂ ಜೀನ್ಸ್‌ ಪ್ಯಾಂಟ್‌ ಧರಿಸಿದ್ದರು. ಇದರಲ್ಲಿ ಸಮಂತಾ ಬೇಬಿ ಬಂಪ್‌ ಕಾಣಿಸಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಕೂಡ ಆಗಿತ್ತು. ಸಮಂತಾ ಖುದ್ದು ತಮ್ಮ ಖಾತೆಯಲ್ಲಿ ಪ್ರೆಗ್ನೆನ್ಸಿ ವಿಷಯವನ್ನು ರಿವೀಲ್‌ ಮಾಡಲಿ ಎಂದು ಫ್ಯಾನ್ಸ್‌ ಕಾಯ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !