May 15, 2026
Friday, May 15, 2026
spot_img

GOOD SLEEP | ರಾತ್ರಿ ಚೆನ್ನಾಗಿ ನಿದ್ರೆ ಬರೋದಿಲ್ವಾ? ಇದೇ ಕಾರಣ ನೋಡಿ

ಇಂದು ಹಲವರಿಗೆ ‘ನಿದ್ರೆ ಬರ್ತಿಲ್ಲ’ ಅನ್ನೋ ಸಮಸ್ಯೆ ಸಾಮಾನ್ಯ. ರಾತ್ರಿ ಹೊತ್ತಿಗೆ ದೇಹ ದಣಿದಿದ್ದರೂ ಮನಸ್ಸು ಮಾತ್ರ ಆಫ್ ಆಗೋದಿಲ್ಲ. ಇದರಿಂದ ಬೆಳಗ್ಗೆ ಎದ್ದು ಕೂಡ ಫ್ರೆಶ್ ಆಗಿರೋದಿಲ್ಲ. ಹಾಗಾದ್ರೆ ಏಕೆ ನಿದ್ರೆ ಸಮಸ್ಯೆ ಬರುತ್ತದೆ? ಅದಕ್ಕೆ ಸಿಂಪಲ್ ಪರಿಹಾರಗಳೇನು ನೋಡೋಣ.

ದಿನಪೂರ್ತಿ ನಡೆದ ಘಟನೆಗಳು, ಕೆಲಸದ ಒತ್ತಡ ಎಲ್ಲ ಮಿಕ್ಸ್ ಆಗಿ ರಾತ್ರಿ ಹೆಚ್ಚು ಯೋಚನೆ ಆಗುತ್ತೆ. ಇದು ನಿದ್ರೆಯನ್ನು ದೂರ ಮಾಡುತ್ತೆ.

ರಾತ್ರಿ ಹೆಚ್ಚು ಖಾರ, ಎಣ್ಣೆಯ ಆಹಾರ ತಿಂದರೆ ಜೀರ್ಣಕ್ರಿಯೆ ನಿಧಾನವಾಗಿ ನಿದ್ರೆ ಕಷ್ಟವಾಗುತ್ತದೆ. ಹಗುರವಾದ, ಸುಲಭ ಜೀರ್ಣವಾಗುವ ಆಹಾರವೇ ಉತ್ತಮ.

ಮಲಗುವ ಮುನ್ನ ಮೊಬೈಲ್, ರೀಲ್ಸ್, ಸೋಶಿಯಲ್ ಮೀಡಿಯಾ ಹೆಚ್ಚು ಬಳಸಿದ್ರೆ ಮೆದುಳು ಆಕ್ಟಿವ್ ಆಗಿರುತ್ತದೆ. ಇದರಿಂದ ನಿದ್ರೆ ತಡವಾಗುತ್ತೆ.

ಒಂದು ದಿನ ಬೇಗ ಮಲಗೋದು, ಮತ್ತೊಂದು ದಿನ ಲೇಟ್ ಆಗೋದು—ಇದರಿಂದ ದೇಹದ ಸಮಯ ಗೊಂದಲವಾಗುತ್ತದೆ. ನಿದ್ರೆ ಸಮಯ ಫಿಕ್ಸ್ ಮಾಡೋದು ಮುಖ್ಯ.

ಪೂರಾ ದಿನ ಕೂತು ಕೆಲಸ ಮಾಡಿದ್ರೆ ದೇಹಕ್ಕೆ ದಣಿವು ಕಡಿಮೆ ಆಗುತ್ತದೆ. ಸ್ವಲ್ಪ ವ್ಯಾಯಾಮ ಮಾಡಿದ್ರೆ ನಿದ್ರೆ ಸುಲಭವಾಗಿ ಬರುತ್ತೆ.

ಸಂಜೆ ನಂತರ ಹೆಚ್ಚು ಕಾಫಿ, ಟೀ ಕುಡಿದ್ರೆ ನಿದ್ರೆ ತಡವಾಗುತ್ತದೆ. ಅದನ್ನು ಕಡಿಮೆ ಮಾಡೋದು ಒಳ್ಳೆಯದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !