ನಾಯಕತ್ವಕ್ಕೆ ವಿರಾಟ್ ಗುಡ್‌ಬೈ: ಕೋಹ್ಲಿ ನಿರ್ಧಾರ ಸಮರ್ಥಿಸಿಕೊಂಡ ಕಪಿಲ್ ದೇವ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ವಿರಾಟ್ ಕೋಹ್ಲಿ ಗುಡ್ ಬೈ ಹೇಳಿದ್ದಾರೆ. ಕೇವಲ ಟೆಸ್ಟ್ ತಂಡದ ನಾಯಕರಾಗಿದ್ದ ಕೋಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಸೋಲಿನ ನಂತರ ಈ ಹುದ್ದೆಗೂ ಪೂರ್ಣ ವಿರಾಮ ಹಾಕಿದ್ದಾರೆ.
ಈ ಬಗ್ಗೆ ಕಪಿಲ್ ದೇವ್ ಕೂಡ ಮಾತನಾಡಿದ್ದು, ವಿರಾಟ್ ತೆಗೆದುಕೊಂಡಿರುವ ನಿರ್ಧಾರ ಸರಿಯಾಗಿದೆ ಎಂದಿದ್ದಾರೆ. ವಿರಾಟ್ ಕ್ಯಾಪ್ಟನ್ಸಿ ಎಂಜಾಯ್ ಮಾಡುತ್ತಿರಲಿಲ್ಲ, ಯಾವಾಗಲೂ ಒತ್ತಡದಲ್ಲೇ ಇರುತ್ತಿದ್ದರು ಎಂದಿದ್ದಾರೆ.
ಒಂದು ಬಾರಿ ಕ್ಯಾಪ್ಟನ್ ಆದವರಿಗೆ ಹೊಸ ಕ್ಯಾಪ್ಟನ್ ಅಡಿಯಲ್ಲಿ ಆಡುವುದು ಕಷ್ಟ. ವಿರಾಟ್ ಇದೀಗ ಅಹಂ ಬಿಟ್ಟು ಹೊಸ ನಾಯಕನ ಅಡಿಯಲ್ಲಿ ಆಡಬೇಕಾಗುತ್ತದೆ ಎಂದಿದ್ದಾರೆ.
ಕ್ಯಾಪ್ಟನ್ ಆದವನ ಮೇಲೆ ನಿರೀಕ್ಷೆ ಹೆಚ್ಚು. ಇದೇ ನಿರೀಕ್ಷೆಯಿಂದಲೇ ಒತ್ತಡಕೊಳಗಾಗಿದ್ದ ವಿರಾಟ್ ಅತ್ಯುತ್ತಮ ಪ್ರದರ್ಶನ ನೀಡೋದಕ್ಕೆ ಸಾಧ್ಯವಾಗ್ತಿರಲಿಲ್ಲ. ಇದೀಗ ಎಲ್ಲ ನಾಯಕತ್ವದಿಂದ ವಿರಾಟ್ ಮುಕ್ತರಾಗಿದ್ದಾರೆ. ಇನ್ನು ಯಾವ ಒತ್ತಡ ಇಲ್ಲದೆ ಅತ್ಯುತ್ತಮ ಪ್ರದರ್ಶನ ನೀಡಬಹುದು. ನಾಯಕತ್ವದಕ್ಕೆ ಗುಡ್ ಬೈ ಹೇಳುವುದು ಸುಲಭವಾದ ನಿರ್ಧಾರ ಅಲ್ಲ, ಏನೇ ಮಾಡಿದ್ದರೂ ಯೋಚಿಸಿಯೇ ಮಾಡಿರುತ್ತಾರೆ. ಅವರು ಪ್ರಬುದ್ಧರು, ಆಲೋಚನೆ ಮಾಡದೇ ಯಾವುದೋ ಒಂದು ಕಾರಣಕ್ಕೆ ಕ್ಯಾಪ್ಟನ್ಸಿ ಬಿಟ್ಟಿರುವುದಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!