ಜೊಜಿಲ್ಲಾ ಸುರಂಗ: 5 ಕಿ.ಮೀ. ಉದ್ದದ ಸುರಂಗ ಕಾಮಗಾರಿ ಮುಕ್ತಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಏಷ್ಯಾದ ಅತ್ಯಂತ ಉದ್ದದ ಜೊಜಿಲ್ಲಾ ಯೋಜನೆಯ 5 ಕಿ.ಮೀ ಸುರಂಗ ಕಾಮಗಾರಿ ಯಶಸ್ವಿಯಾಗಿದೆ.
ಈ ಸುರಂಗ ಶ್ರೀನಗರದಿಂದ ಲೇಹ್‌ ಮತ್ತು ಲಡಾಖ್‌ ಗೆ ಸಂಪರ್ಕ ಒದಗಿಸುವ ರಸ್ತೆ ಮಾರ್ಗವಾಗಿದೆ. ಇದು 14.15 ಕ.ಮೀ. ಸುರಂಗ  ನಿರ್ಮಾಣ ಯೋಜನೆಯಾಗಿದೆ.
ಸುರಂಗವನ್ನು ಸಂಪರ್ಕಿಸುವ ರಸ್ತೆ ಮಾರ್ಗವೂ ಸೇರಿ ಒಟ್ಟಾರೆ 18 ಕಿ.ಮೀ ಕಾಮಗಾರಿ ಇದಾಗಿದೆ.  ಈ ಸವಾಲಿನ ಮೂಲಸೌಕರ್ಯ ಕಾಮಗಾರಿಯ 5 ಕಿ.ಮೀ. ಮಾರ್ಗದ ಸುರಂಗವನ್ನು ಮೆಘಾ ಎಂಜಿನಿಯರಿಂಗ್‌ ಮತ್ತು ಇನ್‌ ಫ್ರಾಸ್ಟಕ್ಚರ್‌ ಲಿ. ಪೂರ್ಣಗೊಳಿಸಿದೆ.‌ 14 ತಿಂಗಳಿನಲ್ಲಿ 18 ಕಿ.ಮೀ. ಉದ್ದದ ರಸ್ತೆ ಮಾರ್ಗವನ್ನು ಪೂರ್ಣಗೊಳಿಸಿ ಸಾಧನೆ ಗೈದಿದೆ.
ಹಿಮ, ಮಳೆಯಂತಹ ಸವಾಲುಗಳನ್ನು ಮೆಟ್ಟಿ, ವರ್ಷವಿಡೀ ಜನರು ಸಂಚರಿಸಲು ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ.
ಈ ಯೋಜನೆ ಬಗ್ಗೆ ಮಾಹಿತಿ ನೀಡಿದ್ದ ಜೊಜಿಲ್ಲಾ ಯೋಜನೆಯ ನಿರ್ದೇಶಕ ಹರ್ ಪಾಲ್‌ ಸಿಂಗ್‌, ಇದು ಏಷ್ಯಾದ ಅತಿ ಉದ್ದದ ದ್ವಿಮುಖ ಸುರಂಗ ಮಾರ್ಗವಾಗಿದ್ದು, ಸಮುದ್ರ ಮಟ್ಟಕ್ಕಿಂತ 2,528 ಮೀಟರ್‌ ಎತ್ತರದಲ್ಲಿದೆ. ಇದು ಜನರಿಗೆ ಮಾತ್ರವಲ್ಲದೆ ಭಾರತೀಯ ಸೇನಾ ವಾಹನಗಳ ಸಂಚಾರಕ್ಕೂ ಅತಿ ಮುಖ್ಯವಾಗಲಿದೆ.
ವೇಗಗತಿಯಲ್ಲಿ ಸಾಗುತ್ತಿರುವ ಈ ಯೋಜನೆಗೆ 2027ರವರೆಗೆ ಅವಕಾಶವಿದ್ದರೂ ಸಹ 2023ರ ಡಿಸೆಂಬರ್ ವೇಳೆಗೆ ಲೋಕಾರ್ಪಣೆಗೊಳ್ಳಲು ಸಜ್ಜಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!