ಗುಡ್‌ನ್ಯೂಸ್: ಹೆಣ್ಣು ಶಿಶುಗಳ ಜನನ ಪ್ರಮಾಣದಲ್ಲಿ ಗಮನಾರ್ಹ ಹೆಚ್ಚಳ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದಿಂದ ಶುಭಸುದ್ದಿ ಹೊರಬಿದ್ದಿದೆ. 2020ರ ವಾರ್ಷಿಕ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ದಶಕದಲ್ಲೇ ಗರಿಷ್ಟ  ಪ್ರಮಾಣದಲ್ಲಿ ಹೆಣ್ಣು ಶಿಶುಗಳ ಜನನ ಪ್ರಮಾಣದಲ್ಲಿ ಏರಿಕೆ ದಾಖಲಿಸಿದೆ.
ಈ ಹೊಸ ಅಂಕಿ ಅಂಶ ನೀಡುತ್ತಿರುವ ಅನುಪಾತವು ಸರಾಸರಿ 1000 ಪುರುಷರಿಗೆ 968 ಮಹಿಳೆಯರು ಎಂಬುದಾಗಿದೆ.
2020ರಲ್ಲಿ ಗ್ರಾಮೀಣ ಪ್ರದೇಶದಲ್ಲಿ 138910 ಶಿಶುಗಳು ಜನಿಸಿದ್ದರೆ, ನಗರ ಪ್ರದೇಶದಲ್ಲಿ 307981 ಶಿಶುಗಳು ಜನಿಸಿವೆ. ಹೆಚ್ಚಿನ ಜನನಗಳು ಜೂನ್, ನವೆಂಬರ್ ತಿಂಗಳಿನಲ್ಲಿ ಸಂಭವಿಸಿವೆ.
2019, 2018 ಮತ್ತು 2011ರಲ್ಲಿ ಅನುಕ್ರಮವಾಗಿ 1000 ಪುರುಷರಿಗೆ 960, 963 ಮತ್ತು 939 ರಷ್ಟಿತ್ತು. 2020ರಲ್ಲಿ ಒಟ್ಟು 446891 ಮಕ್ಕಳು ಜನಿಸಿದ್ದಾರೆ. ಈ ಪೈಕಿ 227053 ಗಂಡು ಮಕ್ಕಳು ಮತ್ತು 219809 ಹೆಣ್ಮಕ್ಕಳು ಜನಿಸಿದ್ದಾರೆ. 29 ಮಕ್ಕಳ ಲಿಂಗವನ್ನು ದಾಖಲಿಸಲಾಗಿರಲಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!